ಜಿಎಸ್‌ಟಿ ಕೊರತೆ: ಸಾಲ ಪಡೆಯುವ ಪ್ರಸ್ತಾವಕ್ಕೆ ಪ.ಬಂಗಾಳದ ತಿರಸ್ಕಾರ

Update: 2020-08-30 16:05 GMT

ಹೊಸದಿಲ್ಲಿ,ಆ.30: ರಾಜ್ಯಗಳ ಜಿಎಸ್‌ಟಿ ಕೊರತೆಯನ್ನು ತುಂಬಿಕೊಳ್ಳಲು ನರೇಂದ್ರ ಮೋದಿ ಸರಕಾರವು ಮುಂದಿಟ್ಟಿರುವ ಸಾಲಗಳನ್ನು ಪಡೆಯುವ ಎರಡು ಪ್ರಸ್ತಾವಗಳನ್ನು ಪ.ಬಂಗಾಳವು ರವಿವಾರ ತಿರಸ್ಕರಿಸಿದೆ.

ರಾಜ್ಯಗಳು ಸಾಲಗಳನ್ನು ಪಡೆದುಕೊಳ್ಳಬೇಕೆಂಬ ಈ ಪ್ರಸ್ತಾವಗಳು ಅವುಗಳ ಅಭಿವೃದ್ಧಿ ನಿಧಿಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನುಂಟು ಮಾಡುತ್ತವೆ ಎಂದು ಪ.ಬಂಗಾಳದ ಹಣಕಾಸು ಸಚಿವ ಅಮಿತ ಮಿತ್ರಾ ಅವರು ಆನ್‌ಲೈನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೇರಳ,ಪಂಜಾಬ ಮತ್ತು ಛತ್ತೀಸ್‌ಗಡದಂತಹ ಪ್ರತಿಪಕ್ಷ ಆಡಳಿತದ ರಾಜ್ಯಗಳು ಸಹ ಈಗಾಗಲೇ ಕೇಂದ್ರದ ಪ್ರಸ್ತಾವಗಳನ್ನು ವಿರೋಧಿಸಿದ್ದು, ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರ ಬಾಕಿಯನ್ನು ಪಾವತಿಸಲು ಕೇಂದ್ರವೇ ಸಾಲ ಪಡೆದುಕೊಳ್ಳಬೇಕು ಎಂದು ಆಗ್ರಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News