ಜಮ್ಮು ಕಾಶ್ಮೀರದಲ್ಲಿ ಗ್ರೆನೇಡ್ ದಾಳಿ: 6 ಮಂದಿ ನಾಗರಿಕರಿಗೆ ಗಾಯ

Update: 2020-08-31 17:37 GMT

ಜಮ್ಮುಕಾಶ್ಮೀರ, ಆ. 31: ಶ್ರೀನಗರದಿಂದ ಬಾರಮುಲ್ಲಾದತ್ತ ಸೋಮವಾರ ಸಂಚರಿಸುತ್ತಿದ್ದ ಸೇನಾ ಬೆಂಗಾವಲು ಸರಣಿ ವಾಹನಗಳನ್ನು ಗುರಿಯಾಗಿರಿಸಿ ಶಂಕಿತ ಉಗ್ರರು ಎಸೆದ ಗ್ರೆನೇಡ್ ರಸ್ತೆ ಬದಿಯಲ್ಲಿ ಸ್ಫೋಟಗೊಂಡ ಪರಿಣಾಮ 6 ಮಂದಿ ನಾಗರಿಕರು ಗಾಯಗೊಂಡಿದ್ದಾರೆ.

ಬಾರಮುಲ್ಲಾದಿಂದ ಶ್ರೀನಗರದತ್ತ ತೆರಳುತ್ತಿದ್ದ ಸೇನಾ ಸರಣಿ ವಾಹನಗಳ ಮೇಲೆ ಶಂಕಿತ ಭಯೋತ್ಪಾದಕರು ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ. ಅದು ಕೊನೆಯ ವಾಹನಕ್ಕೂ ತಾಗದೆ, ಕೆಳಗೆ ಬಿದ್ದು ಸ್ಫೋಟಗೊಂಡಿದೆ. ಇದರಿಂದ 6 ಮಂದಿ ನಾಗರಿಕರು ಗಾಯಗೊಂಡಿದ್ದಾರೆ ಎಂದು ಸೇನೆಯ ಹೇಳಿಕೆ ತಿಳಿಸಿದೆ.

ಗಾಯಗೊಂಡವರನ್ನು ಬಾರಮುಲ್ಲಾ ಜಿಲ್ಲಾ ಆಸ್ಪತ್ರೆಗೆ ವರ್ಗಾಯಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಪ್ರದೇಶವನ್ನು ಸುತ್ತುವರಿಯಾಗಿದೆ ಹಾಗೂ ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿ ಎಂದು ಹೇಳಿಕೆ ತಿಳಿಸಿದೆ. ಗ್ರೆನೇಡ್ ದಾಳಿ ಸಂದರ್ಭ ಟ್ರಕ್, ಜೀಪ್‌ಗಳನ್ನು ಸೇನಾ ಸರಣಿ ವಾಹನಗಳು ಸೇತುವ ದಾಟುತ್ತಿರುವುದು ಸಿಸಿಟಿವಿ ದೃಶ್ಯಾವಳಿಗಳು ಕಂಡು ಬಂದಿದೆ. ವೀಡಿಯೊದ ಅಂತ್ಯದಲ್ಲಿ ಸಣ್ಣ ಸ್ಫೋಟ ಹಾಗೂ ಹೊಗೆ ಕಾಣಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News