×
Ad

ಚೀನಾ: ಕೊರೋನ ಸಂಬಂಧಿ ಅಪರಾಧಗಳಿಗಾಗಿ 5,797 ಬಂಧನ

Update: 2020-09-01 21:44 IST

ಬೀಜಿಂಗ್, ಸೆ. 1: ಚೀನಾದಲ್ಲಿ ಕೊರೋನ ವೈರಸ್ ಸಂಬಂಧಿ ಅಪರಾಧಗಳನ್ನು ಎಸಗಿರುವುದಕ್ಕಾಗಿ ಜನವರಿಯಿಂದ ಈವರೆಗೆ 5,797 ಮಂದಿಯನ್ನು ಬಂಧಿಸಲಾಗಿದೆ ಎಂದು ಸರಕಾರಿ ಪ್ರಾಸಿಕ್ಯೂಟರ್ ಕಚೇರಿ ತಿಳಿಸಿದೆ.

ಈ ವ್ಯಕ್ತಿಗಳು ಮಾರಾಟ ಮಾಡಿರುವ ದೋಷಪೂರಿತ ವೈದ್ಯಕೀಯ ಉಪಕರಣಗಳು ಮತ್ತು ತಮ್ಮ ಪ್ರಯಾಣ ಇತಿಹಾಸದ ಬಗ್ಗೆ ನೀಡಿರುವ ಸುಳ್ಳು ಮಾಹಿತಿಗಳಿಂದಾಗಿ ವೈದ್ಯಕೀಯ ಕೆಲಸಗಾರರು ಮೃತಪಟ್ಟಿದ್ದು, ಅವರನ್ನು ಕೊಂದ ಆರೋಪವನ್ನು ಬಂಧಿತರ ಮೇಲೆ ಹೊರಿಸಲಾಗಿದೆ.

ಈ ಪೈಕಿ ಒಂದು ಪ್ರಕರಣವು, ಸೂಪರ್ ಮಾರ್ಕೆಟೊಂದರಲ್ಲಿ ಮಾಸ್ಕ್ ಧರಿಸುವಂತೆ ಗ್ರಾಹಕನೊಬ್ಬ ಇನ್ನೋರ್ವ ಗ್ರಾಹಕನಿಗೆ ಹೇಳಿದಾಗ, ಆಕ್ರೋಶಗೊಂಡ ಆ ಇನ್ನೋರ್ವ ಗ್ರಾಹಕನು ಮೊದಲ ಗ್ರಾಹಕನನ್ನು ಬಡಿದು ಕೊಂದಿರುವುದಕ್ಕೆ ಸಂಬಂಧಿಸಿದೆ.

ಇನ್ನೊಂದು ಪ್ರಕರಣದಲ್ಲಿ, ಒರ್ವ ವ್ಯಕ್ತಿಯು ವೈದ್ಯಕೀಯ ಕೆಲಸಗಾರರನ್ನು ಉದ್ದೇಶಪೂರ್ವಕವಾಗಿ ಕಾರು ಢಿಕ್ಕಿ ಹೊಡೆಸಿ ಕೊಂದಿದ್ದಾನೆ. ಇನ್ನೊಂದರಲ್ಲಿ, ವೈದ್ಯಕೀಯ ನಿರೀಕ್ಷಕರೊಬ್ಬರು ವ್ಯಕ್ತಿಯೊಬ್ಬನ ದೇಹ ಉಷ್ಣತೆಯನ್ನು ತಪಾಸಣೆ ಮಾಡುತ್ತಿದ್ದಾಗ ಆ ವ್ಯಕ್ತಿಯು ನಿರೀಕ್ಷಕನಿಗೆ ಚೂರಿಯಿಂದ ಇರಿದು ಕೊಂದಿದ್ದಾನೆ.

‘‘ಜನವರಿಯಿಂದ ಜುಲೈವರೆಗೆ 5,797 ಮಂದಿಯನ್ನು ಬಂಧಿಸಲಾಗಿದೆ’’ ಎಂದು ಸುಪ್ರೀಮ್ ಪೀಪಲ್ಸ್ ಪ್ರೊಕ್ಯುರೇಟರೇಟ್ ಹೇಳಿಕೆಯೊಂದರಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News