ತಮಿಳುನಾಡು: ಸ್ಥಾವರ ಸ್ಥಾಪನೆಗೆ 2000 ಮರಗಳಿಗೆ ಕೊಡಲಿಯೇಟು

Update: 2020-09-01 19:06 GMT

ಚೆನ್ನೈ, ಸೆ.1: ವಿಲ್ಲುಪುರಂ ಜಿಲ್ಲೆಯ ಕೂನಿಮೇಡು ರಕ್ಷಿತಾರಣ್ಯದಲ್ಲಿ ನೀರಿನ ಲವಣಾಂಶ ಇಂಗಿಸುವ ಸ್ಥಾವರ ನಿರ್ಮಿಸಲು ಉದ್ದೇಶಿಸಿರುವ ತಮಿಳುನಾಡು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ(ಟಿಡಬ್ಲೂಎಡಿ), ಇದಕ್ಕಾಗಿ 2,092 ಮರಗಳನ್ನು ಕಡಿಯಲು ನಿರ್ಧರಿಸಿರುವುದಾಗಿ ವರದಿಯಾಗಿದೆ.

 ಈ ಬಗ್ಗೆ ಜುಲೈಯಲ್ಲಿ ರಾಜ್ಯ ಸರಕಾರ ಸಲ್ಲಿಸಿರುವ ಪ್ರಸ್ತಾವನೆಯನ್ನು ರಾಜ್ಯದ ಅರಣ್ಯ ಇಲಾಖೆಯ ಅನುಮೋದನೆಯೊಂದಿಗೆ ಕೇಂದ್ರ ಪರಿಸರ ಇಲಾಖೆಯ ಅನುಮತಿಗಾಗಿ ಸಲ್ಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ 14ರಂದು ಚೆನ್ನೈಯಲ್ಲಿ ನಡೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಕೇಂದ್ರ ಪರಿಸರ ಇಲಾಖೆಯ ಪ್ರಾದೇಶಿಕ ಸಮಿತಿಯ ಅಧಿಕಾರಿಗಳು, ಲವಣಾಂಶ ಹೀರಲ್ಪಟ್ಟ ನೀರನ್ನು ಯಾವುದಕ್ಕೆ ಬಳಸಲಾಗುತ್ತದೆ ಎಂಬ ಬಗ್ಗೆ ವಿವರವಾದ ವರದಿ ಸಲ್ಲಿಸಲು ತಿಳಿಸಿದ್ದರು. ಈ ನೀರನ್ನು ಕುಡಿಯಲು ಮತ್ತು ಕೈಗಾರಿಕೆಗಳ ಬಳಕೆಗೆ ಬಳಸುವುದಾಗಿ ರಾಜ್ಯ ಸರಕಾರ ವರದಿ ಸಲ್ಲಿಸಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News