ಬಾಂಗ್ಲಾ: ಹಿಂದೂ ವಿಧವೆಯರಿಗೆ ಗಂಡನ ಆಸ್ತಿಯಲ್ಲಿ ಹಕ್ಕು
Update: 2020-09-04 22:31 IST
ಢಾಕಾ (ಬಾಂಗ್ಲಾದೇಶ), ಸೆ. 4: ಬಾಂಗ್ಲಾದೇಶದ ಹಿಂದೂ ಮಹಿಳೆಯರಿಗೆ ಅವರ ಮೃತ ಗಂಡಂದಿರ ಕೃಷಿ ಮತ್ತು ಕೃಷಿಯೇತರ ಜಮೀನುಗಳೆರಡರಲ್ಲೂ ಹಕ್ಕುಗಳಿವೆ ಎಂದು ದೇಶದ ಹೈಕೋರ್ಟ್ ತೀರ್ಪು ನೀಡಿದೆ. ಬಾಂಗ್ಲಾದೇಶದ ಹಿಂದೂ ಮಹಿಳೆಯರು ಈ ಹಕ್ಕನ್ನು ಪಡೆಯುತ್ತಿರುವುದು ಇದೇ ಮೊದಲ ಬಾರಿಯಾಗಿದೆ.
ಕೃಷಿ ಮತ್ತು ಕೃಷಿಯೇತರ ಜಮೀನುಗಳ ವಿಷಯದಲ್ಲಿ ಯಾವುದೇ ಅಪವಾದವಿರುವುದಿಲ್ಲ ಎಂದು ಬುಧವಾರ ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ಹೇಳಿದೆ. ಹಾಗಾಗಿ, ತಮ್ಮ ಗಂಡಂದಿರ ಜಮೀನುಗಳಲ್ಲಿ ಹಿಂದೂ ಮಹಿಳೆಯರಿಗೆ ಹಕ್ಕುಗಳಿವೆ ಎಂದು ನ್ಯಾಯಾಲಯ ಹೇಳಿದೆ ಎಂದು ‘ದ ಡೇಲಿ ಸ್ಟಾರ್’ ವರದಿ ಮಾಡಿದೆ.