ಸೆಪ್ಟಂಬರ್ 12ರಿಂದ 80 ಹೊಸ ವಿಶೇಷ ರೈಲುಗಳ ಸಂಚಾರ ಆರಂಭ

Update: 2020-09-05 17:34 GMT

ಹೊಸದಿಲ್ಲಿ, ಸೆ. 5: ಸೆಪ್ಟಂಬರ್ 12ರಿಂದ 80 ನೂತನ ವಿಶೇಷ ರೈಲುಗಳು ಸಂಚಾರ ಆರಂಭವಾಗಲಿದೆ. ಸೆಪ್ಟಂಬರ್ 10ರಿಂದ ರಿಸರ್ವೇಶನ್ ಆರಂಭವಾಗಲಿದೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ವಿ.ಕೆ. ಯಾದವ್ ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ರೈಲುಗಳನ್ನು ಸೂಚಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ‘‘80 ನೂತನ ವಿಶೇಷ ರೈಲುಗಳು ಅಥವಾ 40 ಜೋಡಿ ರೈಲುಗಳು ಸೆಪ್ಟಂಬರ್ 12ರಿಂದ ಸಂಚಾರ ಆರಂಭಿಸಲಿದೆ. ಸೆಪ್ಟಂಬರ್ 10ರಿಂದ ರಿಸರ್ವೇಶನ್ ಆರಂಭವಾಗಲಿದೆ. ಈಗಾಗಲೇ ಸಂಚರಿಸುತ್ತಿರುವ 230 ರೈಲುಗಳಿಗೆ ಹೆಚ್ಚುವರಿಯಾಗಿ ಈ ರೈಲುಗಳು ಸಂಚರಿಸಲಿವೆ’’ ಎಂದು ಅವರು ಹೇಳಿದ್ದಾರೆ.

ಯಾವ ರೈಲುಗಳಿಗೆ ದೀರ್ಘ ವೈಟಿಂಗ್ ಲಿಸ್ಟ್ ಇದೆ ಎಂಬುದನ್ನು ನಿರ್ಧರಿಸಲು ಪ್ರಸ್ತುತ ಸಂಚಾರ ನಡೆಸುತ್ತಿರುವ ಎಲ್ಲ ರೈಲುಗಳ ಮೇಲೆ ರೈಲ್ವೆ ಗಮನ ಕೇಂದ್ರೀಕರಿಸಿದೆ ಎಂದು ಯಾದವ್ ತಿಳಿಸಿದ್ದಾರೆ. ನಿರ್ದಿಷ್ಟ ರೈಲಿಗೆ ಬೇಡಿಕೆ ಇದ್ದಾಗಲೆಲ್ಲ, ವೈಟಿಂಗ್ ಲಿಸ್ಟ್ ಉದ್ದ ಇದ್ದಲ್ಲೆಲ್ಲ ನಾವು ನಿಜವಾದ ರೈಲು ಸಂಚಾರದ ಮುನ್ನ ಕ್ಲೋನ್ ರೈಲುಗಳನ್ನು ಓಡಿಸಲಿದ್ದೇವೆ. ಪ್ರಯಾಣಿಕರು ಅದರಲ್ಲಿ ಪ್ರಯಾಣಿಸಬಹುದು ಎಂದು ರೈಲ್ವೆ ಮಂಡಳಿಯ ಅಧ್ಯಕ್ಷರು ತಿಳಿಸಿದ್ದಾರೆ. ಪರೀಕ್ಷೆ ಅಥವಾ ಇತರ ಇಂತಹದೇ ಇತರ ಉದ್ದೇಶಗಳಿಗೆ ರಾಜ್ಯಗಳಿಂದ ಬೇಡಿಕೆ ಬಂದಾಗ ರೈಲ್ವೆ ರೈಲುಗಳ ಸಂಚಾರ ಆರಂಭಿಸಲಿದ್ದೇವೆ ಎಂದು ಯಾದವ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News