ಜಪಾನ್‌ಗೆ ಹೈಶೆನ್ ಚಂಡಮಾರುತ ಭೀತಿ: 8.10 ಲಕ್ಷ ಮಂದಿಯ ಸ್ಥಳಾಂತರ

Update: 2020-09-06 17:20 GMT

 ಟೋಕಿಯೊ,ಸೆ.6: ಪ್ರಬಲವಾದ ಹೈಶೆನ್ ಚಂಡಮಾರುತವು ವೇಗವಾಗಿ ಧಾವಿಸಿ ಬರುತ್ತಿರುವ ಹಿನ್ನೆಲೆಯಲ್ಲಿ ಜಪಾನ್‌ನ ಕ್ಷಿಣ ಹಾಗೂ ನೈಋತ್ಯ ಕರಾವಳಿ ಪ್ರದೇಶಗಳಲ್ಲಿ ವಾಸವಾಗಿರು 8.10 ಲಕ್ಷ ಮಂದಿಯನ್ನು ಸ್ಥಳದಿಂದ ತೆರವುಗೊಳಿಸುವಂತೆ ಅಧಿಕಾರಿಗಳು ಆದೇಶಿಸಿದ್ದಾರೆಂದು ಎನ್‌ಎಚ್‌ಕೆ ಸುದ್ದಿಸಂಸ್ಥೆ ವರದಿ ಮಾಡಿದೆ.

  ಜಪಾನ್‌ನ ಇತರ 10 ಪ್ರಾಂತಗಳಿಗೂ ಹೈಶಾನ್ ಚಂಡಮಾರುತ ಅಪ್ಪಳಿಸುವ ಭೀತಿಯಿರುವುದರಿಂದ ಅಲ್ಲಿ ನೆಲೆಸಿರುವ 55 ಲಕ್ಷ ಮಂದಿಯನ್ನು ಕೂಡಾ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆಯೂ ಶಿಫಾರಸು ಮಾಡಲಾಗಿದೆಯೆಂದು ತಿಳಿದುಬಂದಿದೆ.

  ಹೈಶೆನ್ ಚಂಡಮಾರುತವು ಸ್ಥಳೀಯ ಕಾಲಮಾನ 5:00 ಗಂಟೆಯ ವೇಳೆಗೆ ದಕ್ಷಿಣ ಜಪಾನ್‌ನ ದ್ವೀಪವಾದ ಯಕುಶಿಮಾದಿಂದ 70 ಕಿ.ಮೀ. ದೂರದಲ್ಲಿದ್ದು, ಅದು ತಾಸಿಗೆ 70ಕಿ.ಮೀ. ವೇಗದಲ್ಲಿ ಧಾವಿಸುತ್ತಿದೆ.

ಹೈಶೆನ್ ಚಂಡಮಾರುತವು ರವಿವಾರ ಮಧ್ಯರಾತ್ರಿಯ ವೇಳೆಗೆ ಜಪಾನ್‌ನ ಯೂಶೋ ದ್ವೀಪದ ಮೇಲೆ ಅಪ್ಪಳಿಉವ ಭೀತಿಯಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News