ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಯುವಕರು ಚೀನಾದಲ್ಲಿ ಪತ್ತೆ: ಕಿರಣ್ ರಿಜಿಜು

Update: 2020-09-08 17:33 GMT

ಗುವಾಹಟಿ, ಸೆ. 8: ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಐವರು ಯುವಕರು ಚೀನಾದಲ್ಲಿ ಪತ್ತೆಯಾಗಿದ್ದಾರೆ ಎಂದು ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.

‘‘ಭಾರತೀಯ ಸೇನೆ ರವಾನಿಸಿದ ಹಾಟ್‌ಲೈನ್ ಸಂದೇಶಕ್ಕೆ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಪ್ರತಿಕ್ರಿಯೆ ನೀಡಿದೆ. ಅರುಣಾಚಲ ಪ್ರದೇಶದಲ್ಲಿ ನಾಪತ್ತೆಯಾಗಿದ್ದ ಯುವಕರು ನಮ್ಮ ಭೂಭಾಗದಲ್ಲಿ ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ. ಯುವಕರನ್ನು ನಮಗೆ ಹಸ್ತಾಂತರಿಸಲು ಮುಂದಿನ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ’’ ಎಂದು ರಿಜಿಜು ಟ್ವೀಟ್ ಮಾಡಿದ್ದಾರೆ.

ಅರುಣಾಚಲ ಪ್ರದೇಶದ ಗಡಿ ಕೇಂದ್ರದಲ್ಲಿರುವ ಪಿಎಲ್‌ಎ ನೆಲೆಗೆ ಭಾರತೀಯ ಸೇನೆ ರವಿವಾರ ಹಾಟ್‌ಲೈನ್ ಸಂದೇಶ ರವಾನಿಸಿತ್ತು. ಆದರೆ, ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ರಿಜಿಜು ರವಿವಾರ ತಿಳಿಸಿದ್ದರು. ಭಾರತೀಯ ಸೇನೆ ರವಾನಿಸಿದ್ದ ಹಾಟ್‌ಲೈನ್ ಸಂದೇಶಕ್ಕೆ ಚೀನಾ ಪಿಎಲ್‌ಎ ಪ್ರತಿಕ್ರಿಯೆ ನೀಡಿದೆ. ನಾಪತ್ತೆಯಾಗಿರುವ ಯುವಕರು ಚೀನಾ ಭೂಭಾಗದಲ್ಲಿ ಇರುವುದಾಗಿ ಅದು ದೃಢಪಡಿಸಿದೆ ಎಂದು ರಿಜಿಜು ಟ್ವೀಟ್‌ನಲ್ಲಿ ಹೇಳಿದ್ದಾರೆ. ಯುವಕರು ಅಪಹರಣಕ್ಕೆ ಒಳಗಾಗಿದ್ದಾರೆ ಎಂದು ಕುಟುಂಬ ಸಾಮಾಜಿಕ ಜಾಲತಾಣದಲ್ಲಿ ಸಂದೇಶ್ ಅಪ್‌ಲೋಡ್ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಯುವಕರ ಮನೆ ಇರುವ ಮೇಲಿನ ಸುಬಾನ್ಸಿರಿ ಜಿಲ್ಲೆಯ ನ್ಯಾಕೋ ಸರ್ಕಲ್‌ನಲ್ಲಿ ಅರುಣಾಚಲಪ್ರದೇಶ ಸರಕಾರ ತಳ ಮಟ್ಟದ ತನಿಖೆ ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News