ಮುಂದಿನ ಸಾಂಕ್ರಾಮಿಕಕ್ಕೆ ಜಗತ್ತು ಹೆಚ್ಚು ಸಿದ್ಧವಾಗಿರಬೇಕು: ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಕರೆ

Update: 2020-09-08 17:39 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಸೆ. 8: ಮುಂದಿನ ಸಾಂಕ್ರಾಮಿಕವನ್ನು ಎದುರಿಸಲು ಜಗತ್ತು ಹೆಚ್ಚು ಸನ್ನದ್ಧವಾಗಿರಬೇಕಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಮಹಾನಿರ್ದೇಶಕ ಟೆಡ್ರಾಸ್ ಅದನಾಮ್ ಗೇಬ್ರಿಯೇಸಸ್ ಸೋಮವಾರ ಹೇಳಿದ್ದಾರೆ ಹಾಗೂ ಸಾರ್ವಜನಿಕ ಆರೋಗ್ಯದ ಮೇಲೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡುವಂತೆ ದೇಶಗಳಿಗೆ ಕರೆ ನೀಡಿದ್ದಾರೆ.

ಜಗತ್ತಿನಾದ್ಯಂತ 2.72 ಕೋಟಿಗೂ ಅಧಿಕ ಮಂದಿ ಕೊರೋನ ವೈರಸ್ ಸೋಂಕಿಗೆ ಒಳಗಾಗಿದ್ದಾರೆ ಹಾಗೂ ಈ ಪೈಕಿ 8,88,326 ಮಂದಿ ಮೃತಪಟ್ಟಿದ್ದಾರೆ ಎಂಬುದಾಗಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ಸಂಗ್ರಹಿಸಿದ ಅಂಕಿಅಂಶಗಳು ಹೇಳುತ್ತವೆ.

‘‘ಇದು ಜಗತ್ತಿನ ಮೇಲೆ ಆಕ್ರಮಣಗೈದಿರುವ ಮೊದಲ ಸಾಂಕ್ರಾಮಿಕವೇನೂ ಅಲ್ಲ’’ ಎಂದು ಜಿನೀವದಲ್ಲಿ ವೀಡಿಯೊ ಕಾನ್ಫರೆನ್ಸ್ ಮೂಲಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗೇಬ್ರಿಯೇಸಸ್ ನುಡಿದರು.

‘‘ಸಾಂಕ್ರಾಮಿಕಗಳು ಮತ್ತು ಅವುಗಳ ಸ್ಫೋಟ ಜೀವನದ ಭಾಗ ಎನ್ನುವುದನ್ನು ಇತಿಹಾಸ ನಮಗೆ ಕಲಿಸಿದೆ. ಆದರೆ, ಮುಂದಿನ ಸಾಂಕ್ರಾಮಿಕ ದಾಳಿಯಿಡುವಾಗ ಜಗತ್ತು ಅದಕ್ಕೆ ಸಿದ್ಧವಾಗಿರಬೇಕು. ಈಗಿನದಕ್ಕಿಂತಲೂ ಹೆಚ್ಚಿನ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News