ಕೋವಿಡ್-19ರಿಂದ ಸರಿತಾದೇವಿ ಗುಣಮುಖ

Update: 2020-09-08 18:36 GMT

ಹೊಸದಿಲ್ಲಿ: ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಎಲ್.ಸರಿತಾದೇವಿ ಕೋವಿಡ್-19ರಿಂದ ಚೇತರಿಸಿಕೊಂಡಿದ್ದಾರೆ. ಆದರೆ, ಅವರು ಇನ್ನೂ 10 ದಿನಗಳ ಕಾಲ ಇಂಫಾಲದಲ್ಲಿರುವ ತಮ್ಮ ಮನೆಗೆ ತೆರಳದೆ ಪ್ರತ್ಯೇಕವಾಗಿ ವಾಸಿಸಲು ನಿರ್ಧರಿಸಿದ್ದಾರೆ.

 38ರ ಹರೆಯದ ಸರಿತಾಗೆ ಆಗಸ್ಟ್ 17ರಂದು ಪತಿ ಥೊಯ್ಬ್ ಸಿಂಗ್ ಅವರ ಜೊತೆಗೆ ಕೋವಿಡ್-19 ದೃಢಪಟ್ಟಿತ್ತು. ಕೊರೋನ ಟೆಸ್ಟ್ ಫಲಿತಾಂಶ ನೆಗೆಟಿವ್ ಬಂದ ಬಳಿಕ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ‘‘ಕೋವಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ಬಂದಿದ್ದು, ಈಗ ಚೇತರಿಸಿಕೊಂಡಿರುವೆ. ನನ್ನ ಪತಿ ಕಳೆದ ವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ನನಗೆ ಪಾಸಿಟಿವ್ ವರದಿ ಬಂದಾಗ ಕೋವಿಡ್ ಕೇರ್ ಸೆಂಟರ್‌ನಲ್ಲಿ ಇನ್ನಷ್ಟು ಸಮಯ ಕಳೆಯಬೇಕಾಯಿತು. ಕೃತಜ್ಞತೆಯಿಂದ ಅಲ್ಲಿಂದ ಹೊರಬಂದಿದ್ದೇನೆ’’ ಎಂದು ಸರಿತಾ ಪಿಟಿಐಗೆ ತಿಳಿಸಿದರು. 7 ವರ್ಷದ ಮಗನಿಗೆ ಕೋವಿಡ್ ಸೋಂಕು ತಗಲಬಾರದೆಂಬ ಕಾರಣಕ್ಕೆ ಸರಿತಾ ಇಂಫಾಲ್‌ನ ತಮ್ಮ ಮನೆ ಸಮೀಪದ ಅಕಾಡಮಿಯ ಹಾಸ್ಟೆಲ್‌ನಲ್ಲಿ ಸ್ವಲ್ಪ ಸಮಯ ಇರಲು ಬಯಸಿದ್ದಾರೆ. ಕಳೆದ ವಾರ ಸರಿತಾ ಅವರ ಮಗನ ಕೋವಿಡ್ ಪರೀಕ್ಷೆ ನೆಗೆಟಿವ್ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News