ಆಕ್ಸ್‌ಫರ್ಡ್ ಕೊರೋನ ಲಸಿಕೆ ಸ್ವೀಕರಿಸಿದ ವ್ಯಕ್ತಿಗೆ ಅನಿರೀಕ್ಷಿತ ಕಾಯಿಲೆ !

Update: 2020-09-09 14:54 GMT

ಲಂಡನ್, ಸೆ. 9: ಕೊರೋನ ವೈರಸ್ ಲಸಿಕೆಯ ಮಾನವ ಪ್ರಯೋಗದಲ್ಲಿ ಪಾಲ್ಗೊಂಡಿರುವ ಸ್ವಯಂಸೇವಕರೊಬ್ಬರು ಅನಿರೀಕ್ಷಿತವಾಗಿ ಕಾಯಿಲೆಪೀಡಿತರಾದ ಬಳಿಕ, ಲಸಿಕೆಯ ಕ್ಲಿನಿಕಲ್ ಪರೀಕ್ಷೆಗೆ ‘ಸ್ವಯಂಪ್ರೇರಿತವಾಗಿ ವಿರಾಮ ನೀಡಲಾಗಿದೆ’ ಎಂದು ಔಷಧ ತಯಾರಿಕಾ ಕಂಪೆನಿ ಆ್ಯಸ್ಟ್ರಾಝೆನೆಕ ಮಂಗಳವಾರ ತಿಳಿಸಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸಹಭಾಗಿತ್ವದೊಂದಿಗೆ ಔಷಧಿಯನ್ನು ಅಭಿವೃದ್ಧಿಪಡಿಸುತ್ತಿರುವ ಕಂಪೆನಿಯು ಕೋವಿಡ್-19 ಲಸಿಕೆಗಾಗಿನ ಜಾಗತಿಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿದೆ.

‘‘ಆಕ್ಸ್‌ಫರ್ಡ್ ಕೊರೋನ ವೈರಸ್ ಲಸಿಕೆಯ ನಿಯಂತ್ರಿತ ಜಾಗತಿಕ ಪರೀಕ್ಷೆಯ ಭಾಗವಾಗಿ ನಾವು ಈ ಮರುಪರಿಶೀಲನಾ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡಿದ್ದೇವೆ. ಸ್ವತಂತ್ರ ಸಮಿತಿಯೊಂದಕ್ಕೆ ಸುರಕ್ಷತೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ಪರಿಶೀಲಿಸಲು ಅವಕಾಶ ನೀಡುವ ಸಲುವಾಗಿ ನಾವು ಸ್ವಯಂಪ್ರೇರಿತವಾಗಿ ಪರೀಕ್ಷೆಯನ್ನು ನಿಲ್ಲಿಸಿದ್ದೇವೆ’’ ಎಂದು ಕಂಪೆನಿಯ ವಕ್ತಾರರೊಬ್ಬರು ತಿಳಿಸಿದರು.

‘‘ಇದು ಸಾಮಾನ್ಯ ಪ್ರಕ್ರಿಯೆಯಾಗಿದ್ದು, ಪರೀಕ್ಷೆಗಳ ವೇಳೆ ಸ್ವಯಂಸೇವಕರು ವಿವರಣೆಗೆ ಸಿಗದ ಕಾಯಿಲೆಗಳಿಗೆ ತುತ್ತಾದರೆ ಅದರ ಬಗ್ಗೆ ತನಿಖೆ ನಡೆಯುವವರೆಗೆ ಲಸಿಕೆಯ ಪರೀಕ್ಷೆಯನ್ನು ನಿಲ್ಲಿಸಲಾಗುತ್ತದೆ. ಹಾಗಾಗಿ, ನಾವು ಇಲ್ಲಿ ಪ್ರಾಮಾಣಿಕತೆಯಿಂದ ವರ್ತಿಸಿದ್ದೇವೆ’’ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News