ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಆರೋಗ್ಯದಲ್ಲಿ ಗಮನಾರ್ಹ ಸುಧಾರಣೆ: ಪತ್ರಿಕೆ

Update: 2020-09-10 17:08 GMT

ಬರ್ಲಿನ್ (ಜರ್ಮನಿ), ಸೆ. 10: ಮಾರಕ ರಾಸಾಯನಿಕ ವಿಷಪ್ರಾಶನಕ್ಕೆ ಒಳಗಾಗಿರುವ ರಶ್ಯ ಪ್ರತಿಪಕ್ಷ ನಾಯಕ ಅಲೆಕ್ಸೀ ನವಾಲ್ನಿ ಮತ್ತಷ್ಟು ಚೇತರಿಸಿಕೊಂಡಿದ್ದಾರೆ ಹಾಗೂ ಈಗ ಅವರು ಮಾತನಾಡಲು ಸಮರ್ಥರಾಗಿದ್ದಾರೆ ಎಂದು ‘ದೆರ್ ಸ್ಪೈಗಲ್’ ಮ್ಯಾಗಝಿನ್ ಗುರುವಾರ ವರದಿ ಮಾಡಿದೆ.

ಕಳೆದ ತಿಂಗಳು ರಶ್ಯದ ಸೈಬೀರಿಯದಿಂದ ಮಾಸ್ಕೋಗೆ ಹೋಗುವ ವಿಮಾನದಲ್ಲಿ ತೀವ್ರವಾಗಿ ಅಸ್ವಸ್ಥಗೊಂಡಿದ್ದ ನವಾಲ್ನಿಯನ್ನು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಜರ್ಮನಿ ರಾಜಧಾನಿ ಬರ್ಲಿನ್‌ನ ಆಸ್ಪತ್ರೆಯೊಂದಕ್ಕೆ ಸ್ಥಳಾಂತರಿಸಲಾಗಿತ್ತು.

ಅವರ ಮೇಲೆ ನೊವಿಚೊಕ್ ನರ್ವ್ ಏಜಂಟ್ ಎಂಬ ಮಾರಕ ರಾಸಾಯನಿಕವನ್ನು ಪ್ರಯೋಗಿಸಲಾಗಿದೆ ಎಂದು ಜರ್ಮನಿ ಆರೋಪಿಸಿದೆ. ಆದರೆ, ಈ ಆರೋಪವನ್ನು ರಶ್ಯ ನಿರಾಕರಿಸಿದೆ.

ಅವರ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಅವರನ್ನು ನೋಡಲು ಬರುವವರ ಸಂಖ್ಯೆಯಲ್ಲಿ ಹೆಚ್ಚಳವಾಗಲಿದೆ. ಹಾಗಾಗಿ, ಅವರ ಪೊಲೀಸ್ ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮ್ಯಾಗಝಿನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News