×
Ad

ಜಮ್ಮು: ನೆಲಬಾಂಬ್ ಸ್ಫೋಟದಲ್ಲಿ ಇಬ್ಬರು ಯೋಧರಿಗೆ ಗಾಯ

Update: 2020-09-11 23:16 IST

ಜಮ್ಮು, ಸೆ.11: ರಜೌರಿ ಜಿಲ್ಲೆಯ ನೌಶೇರಾ ವಿಭಾಗದಲ್ಲಿ ನಿಯಂತ್ರಣ ರೇಖೆಯಲ್ಲಿ ಹುಗಿದಿಟ್ಟ ನೆಲಬಾಂಬ್ ಸ್ಫೋಟಿಸಿ ಸೇನೆಯ ಇಬ್ಬರು ಯೋಧರು ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. 

ನೌಶೇರಾ ವಿಭಾಗದ ನಿಯಂತ್ರಣ ರೇಖೆಯಲ್ಲಿ ಗುರುವಾರ ಬೆಳಿಗ್ಗೆ ಭಾರತದ ಯೋಧರು ಮುಂಚೂಣಿ ಪ್ರದೇಶದಲ್ಲಿ ಗಸ್ತು ನಿರತರಾಗಿದ್ದ ಸಂದರ್ಭ ಅಚಾನಕ್ ಆಗಿ ನೆಲಬಾಂಬ್‌ನ ಮೇಲೆ ಕಾಲಿಟ್ಟಿದ್ದಾರೆ. ಈ ಸಂದರ್ಭ ನೆಲಬಾಂಬ್ ಸ್ಫೋಟಿಸಿದಾಗ ಸೇನೆಯ ಮೇಜರ್ ಹಾಗೂ ಜ್ಯೂನಿಯರ್ ಕಮಿಷನ್ಡ್ ಆಫೀಸರ್ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಚಿಕಿತ್ಸೆಗಾಗಿ ಉಧಂಪುರದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಇಬ್ಬರೂ ಚೇತರಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.

ಲಘು ತೂಕದ ನೆಲಬಾಂಬ್‌ಗಳು ಮಳೆಗಾಲದಲ್ಲಿ ಕೆಲವೊಮ್ಮೆ ನೆರೆನೀರಿನಲ್ಲಿ ತೇಲಿ ಬಂದು ನಿಯಂತ್ರಣ ರೇಖೆಯ ಬಳಿ ಸಂಗ್ರಹವಾಗುತ್ತದೆ. ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೂ ಪಾಕ್ ಸೇನೆಯ ನೆರವಿನಿಂದ ನಿಯಂತ್ರಣ ರೇಖೆಯ ಬಳಿ ನೆಲಬಾಂಬ್ ಹುಗಿದಿಡುತ್ತವೆ. ಗಸ್ತು ತಿರುಗುವ ಯೋಧರಿಗೆ ನೆಲಬಾಂಬ್ ಗುರುತಿಸುವುದೇ ದೊಡ್ಡ ಸವಾಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News