ಹರಾಜು ಪಟ್ಟಿಯಲ್ಲಿ ಮುನಾಫ್ ಪಟೇಲ್, ಗೇಲ್,ಅಫ್ರಿದಿ

Update: 2020-09-12 17:49 GMT

ಕೊಲಂಬೊ, ಸೆ.12: ಅಕ್ಟೋಬರ್ 1ರಂದು ನಡೆಯಲಿರುವ ಮೊದಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್(ಎಲ್‌ಪಿಎಲ್) ಆಟಗಾರರ ಹರಾಜು ಪ್ರಕ್ರಿಯೆ ಪಟ್ಟಿಯಲ್ಲಿ ಭಾರತದ ಮಾಜಿ ವೇಗದ ಬೌಲರ್ ಮುನಾಫ್ ಪಟೇಲ್, ವೆಸ್ಟ್‌ಇಂಡೀಸ್‌ನ ಕ್ರಿಸ್ ಗೇಲ್ ಹಾಗೂ ಡರೇನ್ ಸಮ್ಮಿ ಸಹಿತ 150 ವಿದೇಶಿ ಆಟಗಾರರಿದ್ದಾರೆ.

ಹರಾಜು ಪಟ್ಟಿಯಲ್ಲಿ ಪಾಕ್‌ನ ಮಾಜಿ ಆಲ್‌ರೌಂಡರ್ ಶಾಹಿದ್ ಅಫ್ರಿದಿ, ಬಾಂಗ್ಲಾದೇಶದ ಸ್ಟಾರ್ ಆಟಗಾರ ಶಾಕಿಬ್ ಅಲ್ ಹಸನ್, ಇನ್ನೋರ್ವ ವಿಂಡೀಸ್ ಆಟಗಾರ ಡರೆನ್ ಬ್ರಾವೊ, ಇಂಗ್ಲೆಂಡ್‌ನ ರವಿ ಬೊಪಾರ ಹಾಗೂ ದಕ್ಷಿಣ ಆಫ್ರಿಕಾದ ಕಾಲಿನ್‌ಮುನ್ರೊ ಹಾಗೂ ಫಿಲ್ಯಾಂಡರ್ ಅವರಿದ್ದಾರೆ.

ನವೆಂಬರ್ 14ರಿಂದ ಡಿ.6ರ ತನಕ ನಿಗದಿಯಾಗಿರುವ ಎಲ್‌ಪಿಎಲ್‌ನಲ್ಲಿ ಐದು ಫ್ರಾಂಚೈಸಿಗಳು ಭಾಗವಹಿಸಲಿವೆ. ಪ್ರತಿ ತಂಡದಲ್ಲಿ 6 ಅಂತರ್‌ರಾಷ್ಟ್ರೀಯ ಆಟಗಾರರಿಗೆ ಅವಕಾಶವಿದೆ. ಆಗಸ್ಟ್‌ನಲ್ಲಿ ನಡೆಯಬೇಕಾಗಿದ್ದ ಟೂರ್ನಿಯು ಕೋವಿಡ್-19ನಿಂದಾಗಿ ಮುಂದೂಡಿಕೆಯಾಗಿತ್ತು. 37ರ ಹರೆಯದ ಪಟೇಲ್ ಭಾರತದ ಪರ 13 ಟೆಸ್ಟ್, 70 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಆಡಿದ್ದು, 2018ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರು.2006ರಲ್ಲಿ ಭಾರತದ ಪರ ಚೊಚ್ಚಲ ಪಂದ್ಯವಾಡಿದ್ದ ಅವರು 2011ರ ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದಾರೆ. ಯುಎಇನಲ್ಲಿ ನಡೆದಿದ್ದ ಟಿ-10 ಲೀಗ್‌ನಲ್ಲಿ ಪಟೇಲ್ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News