ಭೂತಾನ್‌ನಲ್ಲಿ ಚೀನಾ ಸೇನೆಯಿಂದ ಹೊಸದಾಗಿ ಭೂ ಒತ್ತುವರಿ

Update: 2020-09-14 03:56 GMT

ಥಿಂಪು (ಭೂತಾನ್), ಸೆ. 13: ಲಡಾಖ್ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಗಡಿ ವಿವಾದಗಳನ್ನು ಹುಟ್ಟುಹಾಕಿದ ಬಳಿಕ, ಚೀನಾ ಈಗ ಭೂತಾನ್‌ನೊಂದಿಗೆ ತಾನು ಹೊಂದಿರುವ ವಿವಾದಿತ ಪ್ರದೇಶಗಳ ಮೇಲೆ ಕಣ್ಣು ಹಾಕಿದೆ. ಅದಕ್ಕಾಗಿ ಭೂತಾನ್‌ನ ಪಶ್ಚಿಮ ಮತ್ತು ಮಧ್ಯ ಭಾಗಗಳಲ್ಲಿ ಸೇನಾ ಜಮಾವಣೆಯನ್ನು ಹೆಚ್ಚಿಸಿದೆ. ಮುಂಬರುವ 25ನೇ ಸುತ್ತಿನ ಗಡಿ ಮಾತುಕತೆಗಳಲ್ಲಿ ಗಡಿ ವಿವಾದವನ್ನು ಚೀನಾಕ್ಕೆ ಪೂರಕವಾಗಿ ಇತ್ಯರ್ಥಗೊಳಿಸುವುದು ಚೀನಾದ ಉದ್ದೇಶವಾಗಿದೆ ಎಂದು ಬಲ್ಲ ಮೂಲಗಳು ಹೇಳಿವೆ.

 ಚೀನಾದ ಸೇನಾ ಜಮಾವಣೆಯು ಭೂತಾನ್ ಆಡಳಿತದ ಅತ್ಯುನ್ನತ ಮಟ್ಟದಲ್ಲಿ ಆತಂಕವನ್ನು ಸೃಷ್ಟಿಸಿದೆ ಎನ್ನಲಾಗಿದೆ. ಅದೇ ವೇಳೆ, ಮುಂಬರುವ ಗಡಿ ಮಾತುಕತೆಯ ವೇಳೆ, ಭೂತಾನ್‌ನ ಪಶ್ಚಿಮ ಭಾಗದಲ್ಲಿ ಚೀನಾವು ಈಗಾಗಲೇ ಅತಿಕ್ರಮಿಸಿರುವ ಪ್ರದೇಶಗಳು ಮತ್ತು ಅದು ತನ್ನದೆಂದು ಹೇಳಿಕೊಳ್ಳುತ್ತಿರುವ ಜಮೀನುಗಳನ್ನು ವಿನಿಮಯ ರೂಪದಲ್ಲಿ ಪಡೆದುಕೊಳ್ಳುವುದಕ್ಕಾಗಿ ಚೀನಾ ಸೇನೆಯು ಮಧ್ಯ ಭೂತಾನ್‌ನಲ್ಲಿ ಭೂ ಒತ್ತುವರಿಯನ್ನು ಮಾಡಿಕೊಂಡಿದೆ ಎಂದು ಆರೋಪಿಸಲಾಗಿದೆ. ಹಾಲಿ ಒತ್ತುವರಿಯಿಂದ ಹಿಂದೆ ಸರಿದು ಹಿಂದಿನ ಒತ್ತುವರಿಗಳನ್ನು ಖಾಯಂ ಆಗಿ ತನ್ನ ವಶಕ್ಕೆ ತೆಗೆದುಕೊಳ್ಳುವುದು ಚೀನಾದ ಉದ್ದೇಶ ಎಂದು ಬಲ್ಲ ಮೂಲಗಳು ಅಭಿಪ್ರಾಯಪಟ್ಟಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News