ಅಮೆರಿಕ ಕಾಡ್ಗಿಚ್ಚು: ಸಾವಿರಾರು ಮನೆಗಳು ನಾಶ

Update: 2020-09-14 04:04 GMT
ಸಾಂದರ್ಭಿಕ ಚಿತ್ರ

ಸೇಲಂ (ಅವೆುರಿಕ), ಸೆ. 13: ಅಮೆರಿಕದ ಪಶ್ಚಿಮ ಕರಾವಳಿಯ ಮೂರು ರಾಜ್ಯಗಳಲ್ಲಿ ದಾಂಧಲೆಗೈಯುತ್ತಿರುವ ಕಾಡ್ಗಿಚ್ಚು ಆರು ಸಣ್ಣ ಪಟ್ಟಣಗಳು ಮತ್ತು ಸಾವಿರಾರು ಮನೆಗಳನ್ನು ಆಪೋಶನ ತೆಗೆದುಕೊಂಡಿದೆ.

ಆಗಸ್ಟ್ ತಿಂಗಳ ಆದಿ ಭಾಗದಲ್ಲಿ ಆರಂಭವಾಗಿರುವ ಕಾಡ್ಗಿಚ್ಚು ಈಗಾಗಲೇ ಕನಿಷ್ಠ 26 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಅದು ಈಗಾಗಲೇ ನ್ಯೂಜರ್ಸಿ ರಾಜ್ಯದಷ್ಟು ಗಾತ್ರದ ಪ್ರದೇಶವನ್ನು ಸುಟ್ಟು ಹಾಕಿದೆ.

ಆದರೆ, ನಾಲ್ಕು ದಿನಗಳ ಬಿಸಿ ಹಾಗೂ ವೇಗದ ಗಾಳಿಯಿಂದ ಕೂಡಿದ ಹವಾಮಾನದ ಬಳಿಕ, ವಾರಾಂತ್ಯದಲ್ಲಿ ಪೆಸಿಫಿಕ್ ಸಮುದ್ರದಿಂದ ತಂಪಾದ ಗಾಳಿ ಬೀಸಿದೆ. ತಂಪು ವಾತಾವರಣದ ಹಿನ್ನೆಲೆಯಲ್ಲಿ, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ಸಫಲತೆಯನ್ನು ಪಡೆದಿದ್ದಾರೆ. ವಾರದ ಆರಂಭದಲ್ಲಿ ಬೆಂಕಿ ಯಾವುದೇ ನಿಯಂತ್ರಣವಿಲ್ಲದೆ ಮುಂದುವರಿದಿತ್ತು.

ಒರೆಗಾನ್ ರಾಜ್ಯದಲ್ಲಿ ಈ ವಾರ ಕನಿಷ್ಠ ಆರು ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯದ ಕಾಡ್ಗಿಚ್ಚು ಮೇಲುಸ್ತುವಾರಿ ವೆಬ್‌ಸೈಟ್ ತಿಳಿಸಿದೆ. ಮೂರು ಕೌಂಟಿಗಳಲ್ಲಿ ಡಝನ್‌ಗಟ್ಟಲೆ ಜನರು ನಾಪತ್ತೆಯಾಗಿದ್ದಾರೆ ಎಂದು ಗವರ್ನರ್ ಕೇಟ್ ಬ್ರೌನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News