ಉಮರ್ ಖಾಲಿದ್ ಭಾರತದ ಭವಿಷ್ಯದ ನಾಯಕ: ಯೋಗೇಂದ್ರ ಯಾದವ್

Update: 2020-09-14 05:52 GMT

ಹೊಸದಿಲ್ಲಿ: ಯಾವುದೇ ರೀತಿಯ ಹಿಂಸೆ ಮತ್ತು ಕೋಮುವಾದವನ್ನು ಸದಾ ಕಾಲ ವಿರೋಧಿಸುವ ಉಮರ್ ಖಾಲಿದ್ ರಂತಹ ಯುವ ಚಿಂತಕ, ವಿಚಾರವಾದಿಯನ್ನು ಬಂಧಿಸಲು ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎಯನ್ನು ಬಳಸಿರುವುದು ಆಘಾತಕಾರಿ ಎಂದು ಸ್ವರಾಜ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಖಾಲಿದ್ ಅವರು ಭಾರತಕ್ಕೆ ಅರ್ಹರಾದ ನಾಯಕರಲ್ಲಿ ಒಬ್ಬರು ಎನ್ನುವುದರಲ್ಲಿ ಸಂದೇಹವಿಲ್ಲ. ದಿಲ್ಲಿ ಪೊಲೀಸರು ಭಾರತದ ಭವಿಷ್ಯವನ್ನು ದೀರ್ಘಕಾಲ ಬಂಧಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಕಳೆದ ಫೆಬ್ರವರಿಯಲ್ಲಿ ನಡೆದ ಈಶಾನ್ಯ ದೆಹಲಿ ಗಲಭೆಗೆ ಸಂಚು ರೂಪಿಸಿದ ಆರೋಪದಲ್ಲಿ ಜವಾಹರಲಾಲ್ ನೆಹರೂ ವಿವಿಯ ಮಾಜಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರನ್ನು ರವಿವಾರ ರಾತ್ರಿ ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News