ಕೊರೋನವೈರಸ್ ವುಹಾನ್ ಲ್ಯಾಬ್‍ನಲ್ಲಿ ಸಿದ್ಧಗೊಂಡಿತ್ತು, ಪುರಾವೆ ನೀಡುತ್ತೇನೆ: ಚೀನಾದ ವೈರಾಣುತಜ್ಞೆ

Update: 2020-09-14 08:33 GMT

ಬೀಜಿಂಗ್: ಕೊರೋನವೈರಸ್ ಅನ್ನು ಚೀನಾದ ವುಹಾನ್ ನಗರದಲ್ಲಿರುವ ಸರಕಾರಿ ನಿಯಂತ್ರಿತ ಪ್ರಯೋಗಾಲಯದಲ್ಲಿ  ತಯಾರಿಸಲಾಗಿತ್ತು ಹಾಗೂ ಈ ಕುರಿತಂತೆ ತನ್ನ ಬಳಿ ವೈಜ್ಞಾನಿಕ ಆಧಾರವಿದೆ ಎಂದು ಚೀನಾದ ವೈರಾಣು ರೋಗ ತಜ್ಞೆ ಡಾ ಲಿ-ಮೆಂಗ್ ಯನ್  ಎಂಬವರು ಹೇಳಿಕೊಂಡಿದ್ದಾರೆ.

ಚೀನಾ ಸರಕಾರ ಕೋವಿಡ್ ಸಾಂಕ್ರಾಮಿಕದ ಕುರಿತಂತೆ ಸಾರ್ವಜನಿಕವಾಗಿ ಒಪ್ಪಿಕೊಳ್ಳುವ ಮುನ್ನಅದನ್ನು ಮುಚ್ಚಿ ಹಾಕುವ ಯತ್ನ ನಡೆಸಿತ್ತೆಂದು ತಮ್ಮ ತನಿಖೆಯಿಂದ ತಿಳಿದು ಬಂದಿದೆ ಎಂದು ಹಾಂಕಾಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಲಿ-ಮೆಂಗ್ ಯನ್ ಅವರು ಹೇಳಿದ್ದಾರೆ.

ಕೊರೋನವೈರಸ್  ಚೀನಾದ ವೈರಾಲಜಿ ಲ್ಯಾಬ್‍ ನಿಂದ ಬಂದಿದೆಯೇ ಹೊರತು ಅಲ್ಲಿನ ಪ್ರಾಣಿ ಮಾರುಕಟ್ಟೆಯಿಂದಲ್ಲ ಎಂದು ಅವರು ಯುಟ್ಯೂಬ್‍ನಲ್ಲಿ ಬಿಡುಗಡೆಗೊಳಿಸಿರುವ  ವೀಡಿಯೋದಲ್ಲಿ ತಿಳಿಸಿದ್ದಾರೆ ಹಾಗೂ ಎಲ್ಲಾ ಮಾಹಿತಿಯನ್ನು ನೀಡುವುದಾಗಿಯೂ ಹೇಳಿಕೊಂಡಿದ್ದಾರೆ.

ಐಟಿವಿಯ ಲೂಸ್  ವಿಮೆನ್ ಟಾಕ್ ನಲ್ಲಿ ಕಾಣಿಸಿಕೊಂಡಾಗಲೂ ಆಕೆ ಈ ಕುರಿತು ಹೇಳಿಕೊಂಡಿದ್ದಾರೆ. ಹಾಂಕಾಂಗ್ ಸ್ಕೂಲ್ ಆಪ್ ಪಬ್ಲಿಕ್ ಹೆಲ್ತ್ ನಲ್ಲಿ ಕಾರ್ಯನಿರ್ವಹಿಸುವ ಲಿ-ಮೆಂಗ್ ಯನ್ ಅವರು ಚೀನಾದಿಂದ  ಸುರಕ್ಷತೆಯ ದೃಷ್ಟಿಯಿಂದ ಅಮೆರಿಕಾಗೆ ವಲಸೆ ಹೋಗಿದ್ದರೆಂದೂ ಕಾರ್ಯಕ್ರಮದ ವೇಳೆ ಹೇಳಲಾಗಿದೆ.

ಚೀನಾದ ಅಧಿಕಾರಿಗಳು ತಾವು ಸಂಗ್ರಹಿಸಿದ್ದ ಎಲ್ಲಾ ಮಾಹಿತಿಯನ್ನು ತಾವು ದೇಶ ಬಿಟ್ಟು ಹೋಗುವ ಮುಂಚೆ ಅಳಿಸಿ ಹಾಕಿದ್ದರಲ್ಲದೆ ತನ್ನ ವಿರುದ್ಧ ವದಂತಿಗಳನ್ನು ಹರಡುವಂತೆಯೂ ಜನರಿಗೆ ಸೂಚಿಸಿದ್ದರೆಂದೂ ಆಕೆ ಆರೋಪಿಸಿದ್ದಾರೆ.

ಆದರೆ ಆಕೆ ಕೊರೋನವೈರಸ್ ಹುಟ್ಟಿನ ಕುರಿತು ನೀಡಿರುವ ಹೇಳಿಕೆಯನ್ನು  ಚೀನಾದ ನ್ಯಾಷನಲ್ ಹೆಲ್ತ್ ಮಿಷನ್, ವಿಶ್ವ ಆರೋಗ್ಯ ಸಂಸ್ಥೆ ಮತ್ತು ಹಾಂಕಾಂಗ್ ವಿವಿ ತಳ್ಳಿ ಹಾಕಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News