ಅವೆುರಿಕ: ಸೆಲ್ಫಿ ತೆಗೆಯುತ್ತಿದ್ದಾಗ ಜಲಪಾತಕ್ಕೆ ಬಿದ್ದು ಭಾರತೀಯ ಯುವತಿ ಸಾವು

Update: 2020-09-14 17:00 GMT

ವಾಶಿಂಗ್ಟನ್, ಸೆ. 14: ಅಮೆರಿಕದಲ್ಲಿ ಜಲಪಾತವೊಂದರ ಸಮೀಪ ಸೆಲ್ಫಿ ತೆಗೆಯುತ್ತಿದ್ದಾಗ ಆಂಧ್ರಪ್ರದೇಶದ ಯುವತಿಯೊಬ್ಬರು ಆಕಸ್ಮಿಕವಾಗಿ ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ.

ಪೊಲವರಪು ಕಮಲ ಎಂಬ ಮಹಿಳೆಯು ತನ್ನ ಗೆಳೆಯನ ಜೊತೆ ಬಾಲ್ಡ್ ನದಿ ಜಲಪಾತದಲ್ಲಿ ಸೆಲ್ಫಿ ತೆಗೆಯುತ್ತಿದ್ದಾಗ ಇಬ್ಬರೂ ಆಯತಪ್ಪಿ ಜಾರಿ ನೀರಿಗೆ ಬಿದ್ದರು. ಗೆಳೆಯನನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ. ಆದರೆ, ಮಹಿಳೆಯು ಮರದ ದಿಮ್ಮಿಯೊಂದರ ಸಮೀಪ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಅವರ ಮೃತದೇಹವನ್ನು ಹೈದರಾಬಾದ್‌ಗೆ ತರಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ತೆಲುಗು ಅಸೋಸಿಯೇಶನ್ ಈ ನಿಟ್ಟಿನಲ್ಲಿ ಶ್ರಮಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News