ಇಂತಹ ಕಾರ್ಯಕ್ರಮ ದೇಶಕ್ಕೆ ದೊಡ್ಡ ಕೆಡುಕು: ಸುದರ್ಶನ್ ಟಿವಿಯ 'ಯುಪಿಎಸ್ಸಿ ಜಿಹಾದ್'ಗೆ ಸುಪ್ರೀಂ ತರಾಟೆ
Update: 2020-09-15 17:19 IST
ಹೊಸದಿಲ್ಲಿ: ಆಡಳಿತಾತ್ಮಕ ಸೇವೆಗಳಲ್ಲಿ 'ಮುಸ್ಲಿಮರ ಒಳನುಸುಳುವಿಕೆ'ಯ ಹಿಂದಿನ ಸಂಚನ್ನು ಬಯಲಿಗೆಳೆಯುವ ಕಾರ್ಯಕ್ರಮವೆಂದು ಸುದರ್ಶನ್ ಟಿವಿ ಹೇಳಿಕೊಂಡ 'ಯುಪಿಎಸ್ಸಿ ಜಿಹಾದ್' ಶೋ ಪ್ರಸಾರಕ್ಕೆ ತಡೆ ಹೇರಬೇಕೆಂದು ಏಳು ಮಂದಿ ಮಾಜಿ ಐಎಎಸ್ ಅಧಿಕಾರಿಗಳು ಸೋಮವಾರ ಸಲ್ಲಿಸಿದ್ದ ಅಪೀಲಿನ ಕುರಿತಂತೆ ಇಂದು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಕಾರ್ಯಕ್ರಮ ಕಪಟ ಮತ್ತು ಉನ್ಮತ್ತ ಎಂದು ಹೇಳಿತಲ್ಲದೆ ಇಂತಹ ಕಾರ್ಯಕ್ರಮ ದೇಶಕ್ಕೆ ದೊಡ್ಡ ಕೆಡುಕನ್ನು ಉಂಟು ಮಾಡಬಹುದು ಎಂದೂ ಹೇಳಿದೆ.
ಇಂತಹ ಒಂದು ಕಾರ್ಯಕ್ರಮ ಪ್ರಸಾರ ಮಾಡಲುದ್ದೇಶಿಸಿರುವ ಸುದರ್ಶನ್ ಟಿವಿಯನ್ನು ತರಾಟೆಗೆ ತೆಗೆದುಕೊಂಡ ಜಸ್ಟಿಸ್ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ನ್ಯಾಯಪೀಠ, ಭಾರತದಲ್ಲಿ ಇಲೆಕ್ಟ್ರಾನಿಕ್ ಮಾಧ್ಯಮ ಬಹಳಷ್ಟು ವಿಸ್ತಾರವಾದ ಜನಸಂಖ್ಯೆಯನ್ನು ತಲುಪಿರುವುದರಿಂದ ಇಂತಹ ಕಾರ್ಯಕ್ರಮ ಕೆಲವು ನಿರ್ದಿಷ್ಟ ಸಮುದಾಯಗಳನ್ನು ಟಾರ್ಗೆಟ್ ಮಾಡಿ ದೇಶವನ್ನು ಅಸ್ಥಿರಗೊಳಿಸಲು ಕಾರಣವಾಗಬಹುದು ಎಂದಿದೆ.