ಚೀನಾ ಪ್ರವಾಸದ ವಿರುದ್ಧದ ಎಚ್ಚರಿಕೆಯನ್ನು ಸಡಿಲಗೊಳಿಸಿದ ಅಮೆರಿಕ

Update: 2020-09-15 17:39 GMT

ವಾಶಿಂಗ್ಟನ್, ಸೆ. 15: ಅಮೆರಿಕದ ಪ್ರಜೆಗಳು ಚೀನಾ ಪ್ರವಾಸ ಕೈಗೊಳ್ಳುವುದರ ವಿರುದ್ಧ ಹೊರಡಿಸಲಾಗಿರುವ ಎಚ್ಚರಿಕೆಯ ತೀವ್ರತೆಯನ್ನು ಅಮೆರಿಕ ಸೋಮವಾರ ಸಡಿಲಗೊಳಿಸಿದೆ. ಚೀನಾದಲ್ಲಿ ಕೋವಿಡ್-19 ಸಾಂಕ್ರಾಮಿಕ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಅಮೆರಿಕ ಈ ಕ್ರಮ ತೆಗೆದುಕೊಂಡಿದೆ.

ಚೀನಾಕ್ಕೆ ಪ್ರಯಾಣಿಸುವುದನ್ನು ಮರುಪರಿಶೀಲಿಸುವಂತೆ ಅಮೆರಿಕದ ವಿದೇಶಾಂಗ ಇಲಾಖೆಯು ಈಗಲೂ ತನ್ನ ಪ್ರಜೆಗಳನ್ನು ಒತ್ತಾಯಿಸುತ್ತದೆ. ಆದರೆ, ಚೀನಾಕ್ಕೆ ಹೋಗದಂತೆ ತನ್ನ ಪ್ರಜೆಗಳಿಗೆ ನೀಡಲಾಗಿರುವ ಸಾರಾಸಗಟು ಎಚ್ಚರಿಕೆಯಲ್ಲಿ ಅದು ಕೊಂಚ ಮಾರ್ಪಾಡುಗಳನ್ನು ಮಾಡಿದೆ.

‘‘ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಡೇ ಕೇರ್‌ಗಳು ಮತ್ತು ಶಾಲೆಗಳು ಸೇರಿದಂತೆ ತನ್ನ ಹೆಚ್ಚಿನ ವ್ಯಾಪಾರ ಚಟುವಟಿಕೆಗಳನ್ನು ಪುನರಾರಂಭಿಸಿದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News