ಸಾಂಕ್ರಾಮಿಕದಿಂದ ಮಕ್ಕಳ ಶಿಕ್ಷಣಕ್ಕೆ ಬೆದರಿಕೆ: ವಿಶ್ವಬ್ಯಾಂಕ್

Update: 2020-09-17 17:20 GMT

ವಾಶಿಂಗ್ಟನ್, ಸೆ. 17: ಕಳೆದ ದಶಕದಲ್ಲಿ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ, ಅದರಲ್ಲೂ ಮುಖ್ಯವಾಗಿ ಬಡ ದೇಶಗಳಲ್ಲಿ ಸಾಧಿಸಲಾಗಿರುವ ಪ್ರಗತಿಯನ್ನು ಅಳಿಸಿಹಾಕುವ ಬೆದರಿಕೆಯನ್ನು ಕೊರೋನ ವೈರಸ್ ಸಾಂಕ್ರಾಮಿಕ ಒಡ್ಡಿದೆ ಎಂದು ವಿಶ್ವಬ್ಯಾಂಕ್ ಬುಧವಾರ ಎಚ್ಚರಿಸಿದೆ.

ವಿಶ್ವಬ್ಯಾಂಕ್‌ನ 2020ರ ಮಾನವ ಬಂಡವಾಳ ಸೂಚ್ಯಂಕದಲ್ಲಿ ಜಾಗತಿಕ ಬ್ಯಾಂಕ್ ಈ ವಿಷಯವನ್ನು ಪ್ರಸ್ತಾಪಿಸಿದೆ. ಈ ಸೂಚ್ಯಂಕವು, ಶಾಲೆ ಮತ್ತು ಆರೋಗ್ಯರಕ್ಷಣೆ ಕ್ಷೇತ್ರಗಳಿಗೆ ಒತ್ತುಕೊಟ್ಟು, ಮಕ್ಕಳು ಭವಿಷ್ಯಕ್ಕಾಗಿ ಯಾವ ರೀತಿಯಲ್ಲಿ ಸಿದ್ಧಗೊಂಡಿದ್ದಾರೆ ಎಂಬುದರ ಆಧಾರದಲ್ಲಿ ದೇಶಗಳಿಗೆ ಸ್ಥಾನಗಳನ್ನು ನೀಡುತ್ತದೆ.

ಗ್ರೀಸ್‌ನ ಲೆಸ್ಬೋಸ್ ದ್ವೀಪದಲ್ಲಿರುವ ಮೊರಿಯ ನಿರಾಶ್ರಿತ ಶಿಬಿರವು ಇತ್ತೀಚೆಗೆ ಬೆಂಕಿಯಲ್ಲಿ ಸುಟ್ಟು ಹೋದ ಬಳಿಕ, ನೆಲೆ ಕಳೆದುಕೊಂಡಿರುವ ಸಾವಿರಾರು ವಲಸಿಗ ನಿರಾಶ್ರಿತರು ಗುರುವಾರ ದ್ವೀಪದ ರಾಜಧಾನಿ ಮೈಟಿಲೀನ್‌ನತ್ತ ತೆರಳಿದರು. ಆಫ್ರಿಕದಿಂದ ವಲಸೆ ಬಂದಿರುವ ನಿರಾಶ್ರಿತರು ವಾಸಿಸುತ್ತಿದ್ದ ಬೃಹರ್ ಶಿಬಿರಕ್ಕೆ ಕಳೆದ ವಾರ ಅಜ್ಞಾತ ವ್ಯಕ್ತಿಗಳು ಉದ್ದೇಶಪೂರ್ವಕವಾಗಿ ಬೆಂಕಿ ಕೊಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News