ಟಿಕ್‌ಟಾಕ್, ವೀಚ್ಯಾಟ್ ನಿಷೇಧಿಸಿದ ಅಮೆರಿಕ

Update: 2020-09-18 17:01 GMT

ವಾಶಿಂಗ್ಟನ್, ಸೆ. 18: ಚೀನಾ ಒಡೆತನದ ಜನಪ್ರಿಯ ವೀಡಿಯೊ ಆ್ಯಪ್ ಟಿಕ್‌ಟಾಕ್‌ನ್ನು ಡೌನ್‌ಲೋಡ್ ಮಾಡುವುದನ್ನು ಹಾಗೂ ಸಂದೇಶ ಮತ್ತು ಹಣಪಾವತಿ ಆ್ಯಪ್ ವೀಚ್ಯಾಟ್‌ನ್ನು ಬಳಸುವುದನ್ನು ಅಮೆರಿಕ ಶುಕ್ರವಾರ ನಿಷೇಧಿಸಿದೆ. ಈ ಆ್ಯಪ್‌ಗಳು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿವೆ ಎಂದು ಅದು ಹೇಳಿದೆ.

ಅಮೆರಿಕ ಮತ್ತು ಚೀನಾಗಳ ನಡುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ ಚೀನೀ ಆ್ಯಪ್‌ಗಳ ಮೇಲೆ ನಿಷೇಧವನ್ನು ಘೋಷಿಸಲಾಗಿದೆ. ನಿಷೇಧವು ರವಿವಾರ ಜಾರಿಗೆ ಬರಲಿದೆ.

‘‘ಅವೆುರಿಕದ ರಾಷ್ಟ್ರೀಯ ಭದ್ರತೆ, ವಿದೇಶ ನೀತಿ ಮತ್ತು ಆರ್ಥಿಕತೆಗೆ ಬೆದರಿಕೆ ಹಾಕಲು ಚೀನಾ ಕಮ್ಯುನಿಸ್ಟ್ ಪಕ್ಷವು ಈ ಆ್ಯಪ್‌ಗಳನ್ನು ಬಳಸಿಕೊಳ್ಳುತ್ತಿದೆ’’ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್‌ಬರ್ ರಾಸ್ ಹೇಳಿಕೆಯೊಂದರಲ್ಲಿ ತಿಳಿಸಿದರು.

ಈ ಆದೇಶವು ಆ್ಯಪಲ್ ಮತ್ತು ಗೂಗಲ್‌ಗಳ ಆನ್‌ಲೈನ್ ಮಾರುಕಟ್ಟೆ ವೇದಿಕೆಗಳಿಂದ ಈ ಎರಡು ಆ್ಯಪ್‌ಗಳನ್ನು ತೆಗೆದುಹಾಕುತ್ತದೆ. ವೀಚ್ಯಾಟ್ ಆ್ಯಪ್ ಅಮೆರಿಕದ ಚೀನೀ ಭಾಷೆ ಮಾತನಾಡುವ ಜನರಲ್ಲಿ ಭಾರೀ ಜನಪ್ರಿಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News