ಜೀವಿಗಳನ್ನು ಪತ್ತೆಹಚ್ಚಲು ಶುಕ್ರ ಗ್ರಹಕ್ಕೆ ಶೋಧಕ: ನಾಸಾ ಪರಿಶೀಲನೆ

Update: 2020-09-18 17:03 GMT

ವಾಶಿಂಗ್ಟನ್, ಸೆ. 18: ಶುಕ್ರ ಗ್ರಹಕ್ಕೆ ಶೋಧಕವೊಂದನ್ನು ಕಳುಹಿಸುವ ಪ್ರಸ್ತಾಪವೊಂದನ್ನು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಪರಿಶೀಲಿಸುತ್ತಿದೆ. ಆ ಗ್ರಹದಲ್ಲಿ ಜೀವಿಗಳಿವೆಯೇ ಎನ್ನುವುದನ್ನು ಈ ಶೋಧಕವು ಪತ್ತೆಹಚ್ಚಲಿದೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

ಶುಕ್ರ ಗ್ರಹದ ಅತ್ಯಂತ ಆಮ್ಲಯುಕ್ತ ಮೋಡಗಳಲ್ಲಿ ಸೂಕ್ಷ್ಮಾಣು ಜೀವಿಗಳು ವಾಸಿಸುತ್ತಿರುವ ಬಗ್ಗೆ ಪುರಾವೆ ಲಭಿಸಿದೆ ಎಂಬುದಾಗಿ ಅಂತರ್‌ರಾಷ್ಟ್ರೀಯ ಸಂಶೋಧನಾ ತಂಡವೊಂದು ಸೋಮವಾರ ಹೇಳಿದೆ. ಈ ತಂಡವು ಶುಕ್ರನ ಮೋಡಗಳಲ್ಲಿ ಫಾಸ್ಪೈನ್ ಅನಿಲದ ಅಂಶವನ್ನು ಪತ್ತೆಹಚ್ಚಿದೆ. ಭೂಮಿಯಲ್ಲಿ ಈ ಅನಿಲವನ್ನು ಆಮ್ಲಜನಕರಹಿತ ಪರಿಸರದಲ್ಲಿ ವಾಸಿಸುವ ಬ್ಯಾಕ್ಟೀರಿಯಗಳು ಉತ್ಪಾದಿಸುತ್ತವೆ. ಹಾಗಾಗಿ, ಭೂಮಿಯ ಹೊರಗೂ ಜೀವಿಗಳಿರಬಹುದು ಎಂಬುದಕ್ಕೆ ಅದೊಂದು ಪ್ರಬಲ ಪುರಾವೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News