ಪಾಕ್: ಶರೀಫ್ ಹಾಜರುಪಡಿಸಲು ವಿದೇಶ ಕಾರ್ಯದರ್ಶಿಗೆ ನ್ಯಾಯಾಲಯ ಸೂಚನೆ

Update: 2020-09-18 17:37 GMT

ಇಸ್ಲಾಮಾಬಾದ್, ಸೆ. 18: ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ್‌ರನ್ನು ಸೆಪ್ಟಂಬರ್ 22ರಂದು ಲಾಹೋರ್ ಹೈಕೋರ್ಟ್‌ನಲ್ಲಿ ಹಾಜರುಪಡಿಸುವಂತೆ ನ್ಯಾಯಾಲಯದ ಅಧಿಕಾರಿಯೊಬ್ಬರು ಗುರುವಾರ ದೇಶದ ವಿದೇಶ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

70 ವರ್ಷದ ನವಾಝ್ ಶರೀಫ್ ಕಳೆದ ವರ್ಷದ ನವೆಂಬರ್‌ನಿಂದ ಲಂಡನ್‌ನಲ್ಲಿದ್ದಾರೆ. ಚಿಕಿತ್ಸೆಗಾಗಿ ನಾಲ್ಕು ವಾರಗಳ ಕಾಲ ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ಬಳಿಕ ಶರೀಫ್ ಲಂಡನ್‌ಗೆ ಪ್ರಯಾಣಿಸಿದ್ದರು.

ಆ್ಯವನ್‌ಫೀಲ್ಡ್ ಭ್ರಷ್ಟಾಚಾರ ಪ್ರಕರಣದಲ್ಲಿ ಮೂರು ಬಾರಿಯ ಪ್ರಧಾನಿ, ಅವರ ಪುತ್ರಿ ಮರ್ಯಮ್ ಮತ್ತು ಅಳಿಯ ಮುಹಮ್ಮದ್ ಸಫ್ದರ್ ದೋಷಿಗಳು ಎಂಬುದಾಗಿ 2018 ಜುಲೈ 6ರಂದು ನ್ಯಾಯಾಲಯವು ತೀರ್ಪು ನೀಡಿತ್ತು.

ಅಲ್-ಅಝೀಝಿಯ ಸ್ಟೀಲ್ ಮಿಲ್ಸ್ ಪ್ರಕರಣದಲ್ಲೂ ಅವರು ದೋಷಿಯಾಗಿದ್ದು, 2018 ನವೆಂಬರ್‌ನಲ್ಲಿ ನ್ಯಾಯಾಲಯವು ಅವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು.

ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾಗಿರುವುದಕ್ಕಾಗಿ ಇಸ್ಲಾಮಾಬಾದ್ ಹೈಕೋರ್ಟ್ ಸೆಪ್ಟಂಬರ್ 15ರಂದು ಶರೀಫ್ ವಿರುದ್ಧ ಜಾಮೀನುರಹಿತ ಬಂಧನಾದೇಶ ಹೊರಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News