ಡೆನ್ಮಾರ್ಕ್ ಓಪನ್: ಸಿಂಧು ದೂರ

Update: 2020-09-18 18:41 GMT

ಹೊಸದಿಲ್ಲಿ: ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಅಕ್ಟೋಬರ್ 13ರಿಂದ 18ರವರೆಗೆ ಒಡೆನ್ಸ್‌ನಲ್ಲಿ ನಡೆಯಬೇಕಿದ್ದ ಡೆನ್ಮಾರ್ಕ್ ಓಪನ್‌ನಿಂದ ದೂರ ಸರಿಯುವ ನಿರ್ಧಾರ ಪ್ರಕಟಿಸಿದ್ದಾರೆ.

 ಕೋವಿಡ್-19 ಹಿನ್ನೆಲೆಯಲ್ಲಿ ಥಾಮಸ್ ಮತ್ತು ಉಬರ್ ಕಪ್ ಈಗಾಗಲೇ ಮುಂದೂಡಲ್ಪಟ್ಟಿದೆ. ಈ ಕಾರಣದಿಂದಾಗಿ ಕೇವಲ ಒಂದು ಟೂರ್ನಿಯಲ್ಲಿ ಭಾಗವಹಿಸುವುದರಲ್ಲಿ ಅರ್ಥವಿಲ್ಲ. ಎಂದು ಸಿಂಧು ಹೇಳಿದ್ದಾರೆ.

    ‘‘ಥಾಮಸ್ ಮತ್ತು ಉಬರ್ ಕಪ್‌ನಲ್ಲಿ ಆಡುವುದಿಲ್ಲವೆಂದು ನಾನು ಮೊದಲೇ ನಿರ್ಧರಿಸಿದ್ದೆ. ಆದರೆ ಬಿಎಐನ ಉನ್ನತ ಅಧಿಕಾರಿಗಳು ನನ್ನ ನಿಲುವನ್ನು ಮರುಪರಿಶೀಲಿಸುವಂತೆ ಮನವಿ ಮಾಡಿದರು. ನಾನು ನಂತರ ಒಪ್ಪಿಕೊಂಡೆ. ಏಕೆಂದರೆ, ಇದು ಪ್ರಮುಖ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದಾಗಿದೆ. ಈ ಕಾರಣದಿಂದಾಗಿ ನನ್ನ ನಿರ್ಧಾರವನ್ನು ಬದಲಾಯಿಸಿದೆ’’ ಎಂದು ಅವರು ಹೇಳಿದರು.

    ‘‘ಈಗ, ಡೆನ್ಮಾರ್ಕ್ ಓಪನ್‌ಗೆ ಮಾತ್ರ ಹೋಗುವುದು. ಅಲ್ಲಿ ಸಾಂಕ್ರಾಮಿಕ ಪ್ರಕರಣಗಳ ಸಂಖ್ಯೆ ಜಾಸ್ತಿ ಇರುವುದರಿಂದ ಅನಗತ್ಯವಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವುದು ಯೋಗ್ಯವಲ್ಲ’’ ಎಂದು ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಸಿಂಧು ಹೇಳಿದರು.

 ಆದಾಗ್ಯೂ ಈ ವರ್ಷದ ನವೆಂಬರ್‌ನಲ್ಲಿ ನಡೆಯಲಿರುವ ಏಶ್ಯ ಓಪನ್ -1 ಮತ್ತು ಏಶ್ಯ ಓಪನ್ -2 ಪಂದ್ಯಗಳಲ್ಲಿ ಆಡುವ ಆಸಕ್ತಿ ವ್ಯಕ್ತಪಡಿಸಿ ಸಿಂಧು ತನ್ನ ನಿರ್ಧಾರವನ್ನು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News