ಸ್ಟರ್ಲಿಂಗ್ ಬಯೊಟೆಕ್ ಪ್ರಕರಣದ ನ್ಯಾಯವಿಚಾರಣೆಗೆ ನ್ಯಾಯಾಧೀಶರ ನಿರಾಕರಣೆ

Update: 2020-09-21 15:52 GMT

ಹೊಸದಿಲ್ಲಿ, ಸೆ.21: ಗುಜರಾತ್ ಮೂಲದ ಸ್ಟರ್ಲಿಂಗ್ ಬಯೊಟೆಕ್ ಸಮೂಹ ಸಂಸ್ಥೆಯ ಮಾಲಕರ ವಿರುದ್ಧದ 8,100 ಕೋಟಿ ರೂ. ಬ್ಯಾಂಕ್ ಸಾಲ ವಂಚನೆ ಪ್ರಕರಣದ ನ್ಯಾಯವಿಚಾರಣೆಯಿಂದ ಹಿಂದಕ್ಕೆ ಸರಿಯುವುದಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಹೇಳಿದ್ದಾರೆ. ಪ್ರಕರಣದ ಆರೋಪಿಗಳ ಪರವಾಗಿ ತನ್ನ ಶಾಲಾ ಸಹಪಾಠಿಯೊಬ್ಬ ತನ್ನನ್ನು ಸಂಪರ್ಕಿಸಿ ಪ್ರಭಾವ ಬೀರಲು ಪ್ರಯತ್ನಿಸಿದ್ದರಿಂದ ಆಘಾತಗೊಂಡಿದ್ದೇನೆ. ಈ ದುರದೃಷ್ಟಕರ ಘಟನೆಯ ಬಳಿಕ ಪ್ರಕರಣದ ನ್ಯಾಯವಿಚಾರಣೆ ನಡೆಸದಿರಲು ನಿರ್ಧರಿಸಿದ್ದೇನೆ ಎಂದು ನ್ಯಾಯಾಧೀಶ ಧರ್ಮೇಂದ್ರ ರಾಣಾ ಹೇಳಿದ್ದಾರೆ. ಸಂಸ್ಥೆಯ ಮಾಲಕರನ್ನು ಉದ್ದೇಶಪೂರ್ವಕ ಆರ್ಥಿಕ ಅಪರಾಧಿಗಳೆಂದು ಘೋಷಿಸಲು ಕೋರಿ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿಯ ಬಗ್ಗೆ ನ್ಯಾಯಾಧೀಶ ರಾಣಾ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಬೇಕಿತ್ತು. ಆದರೆ ವಿಚಾರಣೆ ಮುಂದುವರಿಸುವ ಮನಸ್ಥಿತಿಯಲ್ಲಿಲ್ಲ. ಆದ್ದರಿಂದ ಈ ಪ್ರಕರಣವನ್ನು ಜಿಲ್ಲಾ ನ್ಯಾಯಾಧೀಶರ ಪೀಠಕ್ಕೆ ವರ್ಗಾಯಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News