ರೈತರನ್ನು ಭಯೋತ್ಪಾದಕರು ಎಂದ ಕಂಗನಾ ವಿರುದ್ಧ ವ್ಯಾಪಕ ಖಂಡನೆ

Update: 2020-09-21 16:12 GMT

ಹೊಸದಿಲ್ಲಿ,ಸೆ.21: ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಕರೆದು ಶಿವಸೇನೆಯ ಕೆಂಗಣ್ಣಿಗೆ ಗುರಿಯಾಗಿದ್ದ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಈಗ ರೈತರನ್ನು ‘ಭಯೋತ್ಪಾದಕರು’ ಎಂದು ಕರೆದಿರುವುದಕ್ಕಗಿ ವ್ಯಾಪಕ ಖಂಡನೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚುತ್ತಿರುವ ಟೀಕೆಗಳಿಂದ ನೊಂದಿರುವ ಕಂಗನಾ ತನ್ನ ವಿರುದ್ಧದ ಆರೋಪವು ನಿರಾಧಾರವಾಗಿದೆ,ಯಾರಾದರೂ ಈ ಆರೋಪವನ್ನು ಸಾಬೀತುಗೊಳಿಸಿದರೆ ತಾನು ಟ್ವಿಟರ್ ಖಾತೆ ತೊರೆಯುವುದಾಗಿ ಸವಾಲೊಡ್ಡಿದ್ದಾರೆ.

ವಿವಾದಾತ್ಮಕ ಕೃಷಿ ಮಸೂದೆಗಳ ವಿರುದ್ಧ ಹೆಚ್ಚುತ್ತಿರುವ ರೈತರ ಪ್ರತಿಭಟನೆಗಳ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸಂತುಷ್ಟಗೊಳಿಸಲು ಬಿಜೆಪಿ ಪರ ಒಲವು ಹೊಂದಿರುವ ಕಂಗನಾ ‘ಮಾನ್ಯ ಪ್ರಧಾನಿಗಳೇ,ಮಲಗಿರುವವರನ್ನು ನಾವು ಎಚ್ಚರಿಸಬಹುದು,ತಪ್ಪು ತಿಳುವಳಿಕೆಯಿಂದ ಒದ್ದಾಡುತ್ತಿರುವವರಿಗೆ ತಿಳಿಹೇಳಬಹುದು. ಆದರೆ ನಿದ್ರಿಸುವಂತೆ ನಟಿಸುತ್ತಿರುವವರನ್ನು ಎಬ್ಬಿಸುವ ಮತ್ತು ಏನೂ ಗೊತ್ತಿಲ್ಲದಂತೆ ತೋರಿಸಿಕೊಳ್ಳುವವರಿಗೆ ತಿಳಿಹೇಳುವ ನಿಮ್ಮ ಪ್ರಯತ್ನ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಇವರೆಲ್ಲ ಅದೇ ಭಯೋತ್ಪಾದಕರಾಗಿದ್ದಾರೆ ’ಎಂದು ಟ್ವೀಟಿಸಿದ್ದರು.

ರೈತರನ್ನು ಭಯೋತ್ಪಾದಕರೆಂದು ಕರೆದಿದ್ದಕ್ಕಾಗಿ ಕಂಗನಾರ ಟೀಕಾಕಾರರು ಅವರನ್ನು ತರಾಟೆಗೆತ್ತಿಕೊಂಡಿದ್ದಾರೆ.

ತನ್ನ ವಿರುದ್ಧದ ಆರೋಪವನ್ನು ನಿರಾಕರಿಸಿರುವ ಕಂಗನಾ,ತಾನು ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದನ್ನು ಯಾರಾದರೂ ಸಾಬೀತು ಮಾಡಿದರೆ ಟ್ವಿಟರ್‌ನ್ನು ತೊರೆಯುವುದಾಗಿ ಟ್ವೀಟಿಸಿದ್ದಾರೆ.‘ದಂಗೆಗಳಿಗೆ ಕಾರಣವಾಗಿದ್ದ ಸಿಎಎ ಕುರಿತು ತಪ್ಪುಮಾಹಿತಿಗಳು ಮತ್ತು ವದಂತಿಗಳನ್ನು ಹರಡಿದ್ದ ಅದೇ ಜನರೇ ಈಗ ಕೃಷಿಮಸೂದೆಗಳ ಕುರಿತು ತಪ್ಪುಮಾಹಿತಿಗಳನ್ನು ಹರಡುತ್ತಿದ್ದಾರೆ ಮತ್ತು ದೇಶದಲ್ಲಿ ಭಯವನ್ನು ಸೃಷ್ಟಿಸುತ್ತಿದ್ದಾರೆ. ಅವರು ಭಯೋತ್ಪಾದಕರಾಗಿದ್ದಾರೆ. ನಾನು ಏನು ಹೇಳಿದ್ದೆ ಎನ್ನುವುದು ನಿಮಗೆ ಚೆನ್ನಾಗಿ ಗೊತ್ತು,ಆದರೆ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದೀರಿ ’ಎಂದೂ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News