ಭಾರತದಲ್ಲಿ ರಶ್ಯದ ಕೋವಿಡ್ ಲಸಿಕೆಯ ಪರೀಕ್ಷಾರ್ಥ ಪ್ರಯೋಗ ಕೆಲವು ವಾರಗಳಲ್ಲಿ ಆರಂಭವಾಗಬಹುದು: ಡಾ.ರೆಡ್ಡೀಸ್ ಲ್ಯಾಬ್

Update: 2020-09-22 17:34 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಸೆ.22: ರಶ್ಯವು ಅಭಿವೃದ್ಧಿಗೊಳಿಸಿರುವ ಸ್ಪುಟ್ನಿಕ್-V ಕೊರೋನ ವೈರಸ್ ಲಸಿಕೆಯ ಅಂತಿಮ ಹಂತದ ಪರೀಕ್ಷಾರ್ಥ ಪ್ರಯೋಗಗಳನ್ನು ತಾನು ಮುಂದಿನ ಕೆಲವೇ ವಾರಗಳಲ್ಲಿ ಆರಂಭಿಸಬಹುದು ಎಂದು ಡಾ.ರೆಡ್ಡೀಸ್ ಲ್ಯಾಬೊರೇಟರಿಸ್ ಲಿ.ನ ಹಿರಿಯ ಅಧಿಕಾರಿ ದೀಪಕ್ ಸಪ್ರಾ ಅವರು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು.

ಪರೀಕ್ಷಾರ್ಥ ಪ್ರಯೋಗಗಳಿಗೆ 1,000-2000 ಜನರನ್ನು ನೋಂದಣಿ ಮಾಡಿಕೊಳ್ಳಲಾಗುವುದು ಮತ್ತು ಈ ಪ್ರಯೋಗಗಳನ್ನು ದೇಶಾದ್ಯಂತ ವಿವಿಧ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ನಡೆಸಲಾಗುವುದು. ಅಗತ್ಯ ಅನುಮತಿಯನ್ನು ಪಡೆದುಕೊಂಡ ಬಳಿಕ ಈ ಪ್ರಯೋಗಗಳನ್ನು ಆರಂಭಿಸಲಾಗುವುದು ಎಂದರು.

 ಈ ಪರೀಕ್ಷಾರ್ಥ ಪ್ರಯೋಗಗಳು ರಶ್ಯನ್ ಡೈರೆಕ್ಟ್ ಇನ್ವೆಸ್ಟ್‌ಮೆಂಟ್ ಫಂಡ್ (ಆರ್‌ಡಿಐಎಫ್) ಮತ್ತು ಡಾ.ರೆಡ್ಡೀಸ್ ನಡುವಿನ ಒಪ್ಪಂದದ ಭಾಗವಾಗಿವೆ. ಡಾ.ರೆಡ್ಡೀಸ್ ಭಾರತದಲ್ಲಿ ಮೂರನೇ ಹಂತದ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿ ನಿಯಂತ್ರಣ ಪ್ರಾಧಿಕಾರದ ಅನುಮತಿಯ ಬಳಿಕ ಅಂತಿಮ ಲಸಿಕೆ ಉತ್ಪನ್ನವನ್ನು ದೇಶದಲ್ಲಿ ವಿತರಿಸಲಿದೆ. ಆರ್‌ಡಿಐಎಫ್ ಡಾ.ರೆಡ್ಡೀಸ್‌ಗೆ 100 ಮಿಲಿಯನ್ ಡೋಸ್‌ಗಳನ್ನು ಪೂರೈಸಲಿದೆ.

ಭಾರತದಲ್ಲಿ 300 ಮಿಲಿಯನ್ ಡೋಸ್‌ಗಳ ತಯಾರಿಕೆಗಾಗಿ ಆರ್‌ಡಿಐಎಫ್ ದೇಶದ ಔಷಧಿ ತಯಾರಕ ಕಂಪನಿಗಳೊಂದಿಗೂ ಒಪ್ಪಂದಗಳನ್ನು ಮಾಡಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News