ಸ್ವಯಂ ನಿವೃತ್ತಿ ಪಡೆದ ಬಿಹಾರದ ಪೊಲೀಸ್ ಮುಖ್ಯಸ್ಥ ಪಾಂಡೆ, ಚುನಾವಣೆಯಲ್ಲಿ ಸ್ಪರ್ಧೆ ಸಾಧ್ಯತೆ

Update: 2020-09-23 05:49 GMT

ಪಾಟ್ನಾ, ಸೆ.23: ಸುಶಾಂತ್ ಸಿಂಗ್ ರಜಪೂತ್ ಪ್ರಕರಣದಲ್ಲಿ ರಿಯಾ ಚಕ್ರವರ್ತಿ ವಿರುದ್ಧ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದ ಬಿಹಾರದ ಪೊಲೀಸ್ ಮುಖ್ಯಸ್ಥ ಗುಪ್ತೇಶ್ವರ ಪಾಂಡೆ ಸ್ವಯಂ ನಿವೃತ್ತಿ ಪಡೆದಿದ್ದಾರೆ.  ಪಾಂಡೆ ರಾಜಕೀಯ ಸೇರುವ ಸಾಧ್ಯತೆ ಎಂದು ವರದಿಯಾಗಿದೆ.

ನನ್ನ ನಿವೃತ್ತಿಗೂ ಸುಶಾಂತ್ ಸಿಂಗ್ ರಜಪೂತ್ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಪಾಂಡೆ ತಿಳಿಸಿದರು,

ಪಾಂಡೆ ಮಂಗಳವಾರ ಬೆಳಗ್ಗೆ ಸಲ್ಲಿಸಿರುವ ಸ್ವಯಂ ನಿವೃತ್ತಿಯ ಕೋರಿಕೆಯನ್ನು ರವಾನಿಸಲಾಗಿದೆ. ಇದನ್ನು ಬಿಹಾರ ಸರಕಾರ ಅಂಗೀಕರಿಸಿತು.  ಇದು ಕಡ್ಡಾಯವಾಗಿ ಮೂರು ತಿಂಗಳ ಕೂಲಿಂಗ್ ಆಫ್ ಅವಧಿಯನ್ನು ರದ್ದುಪಡಿಸಿದೆ. ಎಸ್.ಕೆ. ಸಿಂಘಾಲ್ ನೂತನ ಪೊಲೀಸ್ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

59ರ ಹರೆಯದ ಪಾಂಡೆ ಮುಂಬರುವ ಬಿಹಾರ ಚುನಾವಣೆಯಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಬಕ್ಸರ್ ಜಿಲ್ಲೆಯ ಶಹಾಪುರದಿಂದ ಸ್ಪರ್ಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಿಯಾ ಚಕ್ರವರ್ತಿಯ ವಿರುದ್ಧ ಸುಶಾಂತ್ ಸಿಂಗ್ ಕುಟುಂಬ ದೂರು ಸಲ್ಲಿಸಿದ ತಕ್ಷಣ ಬಿಹಾರ ಸರಕಾರ ಕ್ರಮಕ್ಕೆ ಮುಂದಾಗುವಲ್ಲಿ ಪಾಂಡೆ ಪ್ರಮುಖ ಪಾತ್ರವಹಿಸಿದ್ದರು. ಬಿಹಾರ ಚುನಾವಣೆಗಿಂತ ಮೊದಲು ಸುಶಾಂತ್ ಪ್ರಕರಣವನ್ನುಸಿಬಿಐಗೆ ಒಪ್ಪಿಸಿರುವ ಶ್ರೇಯಸ್ಸನ್ನು ಪಡೆಯಲು ಜೆಡಿಯು ಹಾಗೂ ಬಿಜೆಪಿ ಪೈಪೋಟಿ ನಡೆಸುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News