ರಾಜ್ಯಸಭೆಯಲ್ಲಿ ಎರಡು ದಿನಗಳಲ್ಲಿ 15 ಮಸೂದೆಗಳಿಗೆ ಅಂಗೀಕಾರ!

Update: 2020-09-23 16:10 GMT

ಹೊಸದಿಲ್ಲಿ, ಸೆ.23: ಸಂಸತ್ತಿನಲ್ಲಿ ರವಿವಾರ ನಡೆದ ಕೋಲಾಹಲಕ್ಕೆ ಸಂಬಂಧಿಸಿ ರಾಜ್ಯಸಭೆಯ 8 ಸದಸ್ಯರುಗಳನ್ನು ಅಮಾನತುಗೊಳಿಸಿದ ಬಳಿಕ ವಿರೋಧ ಪಕ್ಷಗಳು ಉಭಯ ಸದನಗಳ ಕಾರ್ಯ ಕಲಾಪವನ್ನು ಬಹಿಷ್ಕರಿಸಿದ್ದವು. ವಿಪಕ್ಷಗಳ ಅನುಪಸ್ಥಿತಿಯಲ್ಲಿ ಕಳೆದ ಎರಡು ದಿನಗಳಲ್ಲಿ 15 ಮಸೂದೆಗಳು ಮೇಲ್ಮನೆಯಲ್ಲಿ ಅಂಗೀಕಾರವಾಗಿವೆ.

ಏಳು ಮಸೂದೆಗಳು ಮಂಗಳವಾರ ಅಂಗೀಕಾರವಾಗಿದ್ದರೆ, 8 ಮಸೂದೆಗಳು ಇಂದು ಅಂಗೀಕಾರವಾಗಿವೆ.

ಇಂದು ಅಂಗೀಕರಿಸಲ್ಪಟ್ಟಿರುವ ಮೂರು ಮಸೂದೆಗಳು ಭಾರೀ ವಿವಾದಾಸ್ಪದ ಕಾರ್ಮಿಕ ಕಾನೂನುಗಳಾಗಿವೆ. ಮಸೂದೆಗಳನ್ನು  ಹೆಚ್ಚಿನ ಕಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಇದರಲ್ಲಿ ಬಿಜೆಪಿಯ ಸೈದ್ದಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಿರುವ ಸಂಘಟನೆಯೂ ಸೇರಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News