ಪಂಜಾಬ್ ಆಟಕ್ಕೆ ಬೆದರಿದ ಬೆಂಗಳೂರು: ಕೊಹ್ಲಿ ಪಡೆಗೆ 97 ರನ್ ಗಳ ಹೀನಾಯ ಸೋಲು

Update: 2020-09-24 17:33 GMT
Photo: Twitter

ದುಬೈ, ಸೆ.24: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ದಾಖಲಿಸಿದ್ದ ಬೃಹತ್ ಮೊತ್ತವನ್ನು ಬೆನ್ನಟ್ಟುವಲ್ಲಿ ಎಡವಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 97 ರನ್ ಗಳಿಂದ ಹೀನಾಯವಾಗಿ ಸೋತಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಪಂಜಾಬ್ ತಂಡ ನಿಗದಿತ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿತ್ತು. ಕೆ.ಎಲ್ ರಾಹುಲ್ 69 ಎಸೆತಗಳಲ್ಲಿ 132 ರನ್ ಗಳಿಸಿ ಮಿಂಚಿದ್ದರು. 207 ರನ್ ಗಳ ಗುರಿ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 17 ಓವರ್ ಗಳಲ್ಲಿ ಕೇವಲ 109 ರನ್ ಗಳಿಸಿ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಬೆಂಗಳೂರು ಪರ ವಾಶಿಂಗ್ಟನ್ ಸುಂದರ್ 30, ವಿಲಿಯರ್ಸ್ 28, ಆರನ್ ಫಿಂಚ್ 20 ರನ್ ಗಳಿಸಿದರು. ಪಂಜಾಬ್ ಪರ ರವಿ ಬಿಶ್ನೋಯ್ 3, ಮುರುಗನ್ ಅಶ್ವಿನ್ 3, ಶೆಲ್ಡನ್ ಕೋಟ್ರೆಲ್ ಎರಡು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News