ಕಾಶ್ಮೀರಿಗಳಿಗೆ ಭಾರತೀಯರೆಂಬ ಭಾವನೆ ಇಲ್ಲ: ಫಾರೂಕ್ ಅಬ್ದುಲ್ಲಾ ವಿವಾದಾತ್ಮಕ ಹೇಳಿಕೆ

Update: 2020-09-24 18:36 GMT

ಹೊಸದಿಲ್ಲಿ, ಸೆ. 24: ಕಾಶ್ಮೀರಿಗಳಿಗೆ ಭಾರತೀಯರೆಂಬ ಭಾವನೆ ಇಲ್ಲ, ಅವರು ಚೀನಾ ಆಳ್ವಿಕೆ ನಡೆಸಬೇಕೆಂದು ಬಯಸುತ್ತಾರೆ ಎಂದು ನ್ಯಾಶನಲ್ ಕಾನ್ಫರೆನ್ಸ್‌ನ ವರಿಷ್ಠ ಹಾಗೂ ಜಮ್ಮುಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಟಿ.ವಿ. ಆ್ಯಂಕರ್ ಹಾಗೂ ಪತ್ರಕರ್ತ ಕರಣ್ ಥಾಪರ್ ಅವರೊಂದಿಗಿನ ಸಂದರ್ಶನದಲ್ಲಿ ಫಾರೂಕ್ ಅಬ್ದುಲ್ಲಾ, ಎರಡನೇ ದರ್ಜೆಯ ನಾಗರಿಕರಂತೆ ಪರಿಗಣಿಸಲಾಗುತ್ತಿರುವ ಕಾಶ್ಮೀರಿಗಳು ಗುಲಾಮರಂತೆ ಎಂದರು.

ಪ್ರಾಮಾಣಿಕವಾಗಿ ಹೇಳುವುದಾದರೆ, ಇಂದು ತನ್ನನ್ನು ಭಾರತೀಯನೆಂದು ಕರೆದುಕೊಳ್ಳುವ ಯಾರಾದರೂ ಒಬ್ಬರನ್ನು ಪತ್ತೆ ಹಚ್ಚಿದರೆ (ಮೋದಿ ಸರಕಾರ) ನಾನು ಅಚ್ಚರಿ ಪಡುತ್ತೇನೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಅವರು ಏನು ಮಾಡಿದರು. ಭಾರತದ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದರು. ನೀವು ಯಾರ ಬಳಿಗೆ ಬೇಕಾದರೂ ಹೋಗಿ ಮಾತನಾಡಿ, ಅವರು ತಾವು ಭಾರತೀಯರು ಎಂದು ಹೇಳಿಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದರು.

  ಇದರ ಬದಲು ಚೀನಾ ಆಡಳಿತವನ್ನು ಕಾಶ್ಮೀರಿಗಳು ಬಯಸುತ್ತಾರೆ ಎಂದು ಹೇಳಿದ ಅವರು, ಕಾಶ್ಮೀರಿಗಳ ಭಾವನೆ ಹೇಗಿದೆ ಎಂದರೆ, ಚೀನಿಯರು ಮುಸ್ಲಿಮರಿಗೆ ಏನು ಮಾಡಿದ್ದಾರೆ ಎಂಬ ಸತ್ಯ ತಿಳಿದಿರುವ ಹೊರತಾಗಿಯೂ ಚೀನಿಯರು ಕಾಶ್ಮೀರ ಪ್ರವೇಶಿಸುವುದನ್ನು ಕಾಯುತ್ತಿದ್ದಾರೆ ಎಂದು ಫಾರೂಕ್ ಅಬ್ದುಲ್ಲಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News