ಹಸ್ತಕ್ಷೇಪರಹಿತ ಚುನಾವಣೆಗೆ ಅಮೆರಿಕ , ರಶ್ಯ ಒಪ್ಪಂದಕ್ಕೆ ವ್ಲಾದಿಮಿರ್ ಪುಟಿನ್ ಕರೆ

Update: 2020-09-26 18:19 GMT

ಮಾಸ್ಕೊ (ರಶ್ಯ), ಸೆ. 26: ಪರಸ್ಪರರ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸದಿರುವ ಒಪ್ಪಂದವೊಂದನ್ನು ರಶ್ಯ ಮತ್ತು ಅಮೆರಿಕ ಮಾಡಿಕೊಳ್ಳಬೇಕು ಎಂಬುದಾಗಿ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಶುಕ್ರವಾರ ಕರೆ ನೀಡಿದ್ದಾರೆ.

 ಸೈಬರ್ ದಾಳಿಗಳನ್ನು ತಡೆಯಲು ಎರಡು ದೇಶಗಳು ಒಪ್ಪಂದವೊಂದಕ್ಕೆ ಬರುವುದನ್ನು ನಾನು ಬಯಸುತ್ತೇನೆ ಎಂದು ಅವೆುರಿಕದ ಅಧ್ಯಕ್ಷೀಯ ಚುನಾವಣೆಯ ವಾರಗಳ ಮೊದಲು ನೀಡಿದ ಹೇಳಿಕೆಯೊಂದರಲ್ಲಿ ರಶ್ಯ ಅಧ್ಯಕ್ಷರು ಹೇಳಿದ್ದಾರೆ. ಅಮೆರಿಕದಲ್ಲಿ ನವೆಂಬರ್ 3ರಂದು ಅಧ್ಯಕ್ಷೀಯ ಚುನಾವಣೆ ನಡೆಯಲಿದೆ.

2016ರಲ್ಲಿ ನಡೆದ ಹಿಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿರುವುದು ದೊಡ್ಡ ಹಗರಣವಾಗಿತ್ತು. ಆ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ರ ವಿಜಯಕ್ಕಾಗಿ ರಶ್ಯ ಹಸ್ತಕ್ಷೇಪ ನಡೆಸಿತ್ತು ಎಂಬ ನಿರ್ಧಾರಕ್ಕೆ ಅವೆುರಿಕದ ಬೇಹುಗಾರಿಕಾ ಸಂಸ್ಥೆಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News