ಉತ್ತರಪ್ರದೇಶ: ಸಾಮೂಹಿಕ ಅತ್ಯಾಚಾರಕ್ಕೀಡಾದ ಯುವತಿ ಮೃತ್ಯು

Update: 2020-09-29 18:24 GMT

 ಹೊಸದಿಲ್ಲಿ, ಸೆ.29:ಎರಡು ವಾರಗಳ ಹಿಂದೆ ಸಾಮೂಹಿಕ ಅತ್ಯಾಚಾರ ಹಾಗೂ ಕಿರುಕುಳಕ್ಕೆ ಒಳಗಾದ ಬಳಿಕ ದಿಲ್ಲಿಯ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ 20ರ ಹರೆಯದ ದಲಿತ ಯುವತಿ ಇಂದು ಮೃತಪಟ್ಟಿದ್ದಾರೆ.ಯುವತಿಯ ಮೇಲೆ ಹಥ್ರಾಸ್‌ನ ಹಳ್ಳಿಯೊಂದರಲ್ಲಿ ನಾಲ್ವರು ದುಷ್ಕಮಿಳು ಅತ್ಯಾಚಾರ ನಡೆಸಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಯುವತಿಯ ಮೈ ಮೇಲೆ ಹಲವು ಗಾಯವಾಗಿದ್ದವು.ಆಕೆಯ ನಾಲಗೆಯನ್ನು ಕತ್ತರಿಸಲಾಗಿತ್ತು. ಯುವತಿಗೆ ದಿಲ್ಲಿಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ಯುವತಿಯ ಮೇಲೆ ದಾಳಿ ನಡೆಸಿದ ದುಷ್ಕಮಿಗಳು ಈಗ ಜೈಲಿನಲ್ಲಿದ್ದಾರೆ.ಮಹಿಳೆಯು ಹಿಂದುಳಿದ ವರ್ಗಕ್ಕೆ ಸೇರಿದವಳಾಗಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿದವರು ಮೇಲ್ಜಾತಿಗೆ ಸೇರಿದವರಾಗಿದ್ದರು.

ಉತ್ತರ ಪ್ರದೇಶ ಪೊಲೀಸರು ಆರಂಭದಲ್ಲಿ ತಮಗೆ ನೆರವು ನೀಡಲಿಲ್ಲ. ಸಾರ್ವಜನಿಕರ ಆಕ್ರೋಶದ ಬಳಿಕ ನೆರವಿಗೆ ಬಂದರು ಎಂದು ಯುವತಿಯ ಕುಟುಂಬದವರು ಆರೋಪಿಸಿದ್ದಾರೆ. ಯುವತಿಯ ಮೇಲೆ ಸೆಪ್ಟಂಬರ್ 14 ರಂದು ದಿಲ್ಲಿಯಿಂದ 200 ಕಿ.ಮೀ. ದೂರದ ಹಾಥ್ರಸ್‌ನ ಹಳ್ಳಿಯಲ್ಲಿ ಹುಲ್ಲು ತರಲು ಹೋಗಿದ್ದ ಯುವತಿಯ ಮೇಲೆ ನಾಲ್ವರ ತಂಡ ಅತ್ಯಾಚಾರ ನಡೆಸಿತ್ತು.

ಯುವತಿಯ ಸಾವಿಗೆ ನಟಿಯರಾದ ಕಂಗನಾ ರಾಣಾವತ್ ರಿಚಾ ಚಡ್ಡಾ ಹಾಗೂ ಸ್ವರ ಭಾಸ್ಕರ್ ಸಂತಾಪ ವ್ಯಕ್ತಪಡಿಸಿದ್ದಾರೆ.

‘‘ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಗುಂಡು ಹಾರಿಸಿ ಹತ್ಯೆಗೈಯಿರಿ. ದೇಶದಲ್ಲಿ ಪ್ರತಿವರ್ಷ ಏರಿಕೆಯಾಗುತ್ತಿರುವ ಸಾಮೂಹಿಕ ಅತ್ಯಾಚಾರಕ್ಕೆ ಪರಿಹಾರ ಏನು?, ಈ ದೇಶಕ್ಕೆ ಇಂದು ಎಂತಹ ದುಃಖ ಹಾಗೂ ಅವಮಾನಕರ ದಿನ. ನಮ್ಮ ಪುತ್ರಿಯರನ್ನ ರಕ್ಷಿಸಲು ಸಾಧ್ಯವಾಗದೇ ಇರುವುದಕ್ಕೆ ನಾಚಿಕೆ ಆಗಬೇಕು’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News