ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ವಶ

Update: 2020-09-29 18:26 GMT

ಗುವಾಹಟಿ: ಗಡಿ ಭದ್ರತಾ ಪಡೆ ಮಂಗಳವಾರ ಬಾಂಗ್ಲಾದೇಶದೊಂದಿಗಿನ ತ್ರಿಪುರಾ-ಮಿಝೋರಾಂ ಅಂತಾರಾಷ್ಟ್ರೀಯ ಗಡಿ ರೇಖೆಯಲ್ಲಿ ಮೂವರನ್ನು ಬಂಧಿಸಿದೆ ಹಾಗೂ ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದೆ.

 ಬಂಧಿತ ಮೂವರು ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರ ಅಕ್ರಮ ಸಾಗಾಟದ ಭಾಗ ಎಂದು ಬಿಎಸ್‌ಎಫ್ ಮಂಗಳವಾರ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಬಾಂಗ್ಲಾದೇಶದೊಂದಿಗಿನ ಭಾರತದ ಅಂತಾರಾಷ್ಟ್ರೀಯ ಗಡಿಯಿಂದ 15 ಕಿ.ಮೀ. ವೈಮಾನಿಕ ಅಂತರದ ಮಿಝೋರಾಂನ ಫುಲ್ದುಂಗಂಸೈ ಪ್ರದೇಶದಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳ ಅಕ್ರಮ ಸಾಗಾಟ ನಡೆಯುತ್ತಿದೆ ಎಂಬ ಬಗ್ಗೆ ಬೇಹುಗಾರಿಕೆ ಇಲಾಖೆ ನೀಡಿದ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಬಿಎಸ್‌ಎಫ್ ಕಾರ್ಯಾಚರಣೆ ನಡೆಸಿತ್ತು.

 ತ್ರಿಪುರಾ-ಮಿಜೋರಾಂ ಗಡಿಯಲ್ಲಿರುವ ಫುಲ್ದುಂಗಂಸೈ ಗ್ರಾಮ ತ್ರಿಪುರದ ಅಂಚಿನಲ್ಲಿ ಇರುವ ಗ್ರಾಮ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News