ಬೆಲ್ಜಿಯಮ್‌ಗೆ 493 ದಿನಗಳ ಬಳಿಕ ನೂತನ ಪ್ರಧಾನಿ

Update: 2020-09-30 17:11 GMT

ಬ್ರಸೆಲ್ಸ್ (ಬೆಲ್ಜಿಯಮ್), ಸೆ. 30: ಉದಾರವಾದಿ ನಾಯಕ ಅಲೆಕ್ಸಾಂಡರ್ ಡಿ ಕ್ರೂ ಬೆಲ್ಜಿಯಮ್‌ನ ನೂತನ ಪ್ರಧಾನಿಯಾಗಲಿದ್ದಾರೆ ಎಂಬುದಾಗಿ ಬುಧವಾರ ಘೋಷಿಸಲಾಗಿದೆ.

16 ತಿಂಗಳ ಹಿಂದೆ ನಡೆದ ಚುನಾವಣೆಯಲ್ಲಿ ನಿರ್ಣಾಯಕ ಫಲಿತಾಂಶ ಬಾರದ ಹಿನ್ನೆಲೆಯಲ್ಲಿ, ಅವರು 7 ಪಕ್ಷಗಳ ಮೈತ್ರಿ ಸರಕಾರದ ಮುಖ್ಯಸ್ಥರಾಗಿ ಹೊರಹೊಮ್ಮಿದ್ದಾರೆ.

ಹಣಕಾಸು ಸಚಿವ ಡಿ ಕ್ರೂರನ್ನು ಪ್ರಧಾನಿಯಾಗಿ ನೇಮಿಸಿರುವುದನ್ನು ಅವರ ಎದುರಾಳಿ ಪೌಲ್ ಮ್ಯಾಗ್ನೆಟ್ ಖಚಿತಪಡಿಸಿದ್ದಾರೆ.

ಚಾರ್ಲ್ಸ್ ಮೈಕಲ್‌ರ ಸರಕಾರ ಪತನಗೊಂಡ ಬಳಿಕ, 21 ತಿಂಗಳುಗಳ ಕಾಲ ಬೆಲ್ಜಿಯಮ್‌ನಲ್ಲಿ ಬಹುಮತದ ಸರಕಾರವಿರಲಿಲ್ಲ. 493 ದಿನಗಳ ಹಿಂದೆ ಚುನಾವಣೆ ನಡೆದರೂ ಸರಕಾರದ ಮುಖ್ಯಸ್ಥರನ್ನು ಈಗಷ್ಟೇ ಆಯ್ಕೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News