ಬಡ ದೇಶಗಳಿಗೆ ಕೊರೋನ ಲಸಿಕೆ ಖರೀದಿಸಲು 88, 500 ಕೋ.ರೂ. ನೆರವಿಗೆ ವಿಶ್ವಬ್ಯಾಂಕ್ ಮನವಿ

Update: 2020-09-30 17:15 GMT

ವಾಶಿಂಗ್ಟನ್, ಸೆ. 30: ಮುಂದೆ ಕೋವಿಡ್-19 ಲಸಿಕೆಗಳನ್ನು ಖರೀದಿಸಲು ಮತ್ತು ವಿತರಿಸಲು ಬಡ ರಾಷ್ಟ್ರಗಳಿಗೆ ಸಾಧ್ಯವಾಗುವಂತೆ ಅವುಗಳಿಗೆ 12 ಬಿಲಿಯ ಡಾಲರ್ (ಸುಮಾರು 88,500 ಕೋಟಿ ರೂಪಾಯಿ) ಒದಗಿಸಲು ಅನುಮೋದನೆ ನೀಡುವಂತೆ ತನ್ನ ನಿರ್ದೇಶಕರ ಮಂಡಳಿಗೆ ವಿಶ್ವಬ್ಯಾಂಕ್ ಮಂಗಳವಾರ ಮನವಿ ಮಾಡಿದೆ.

ಬ್ಯಾಂಕ್ ಈಗಾಗಲೇ 111 ದೇಶಗಳಿಗಾಗಿ ತುರ್ತು ನೆರವು ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಹಾಗೂ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದರೆ ಹೆಚ್ಚುವರಿ ಹಣವನ್ನು ಕೆಳ ಮತ್ತು ಮಧ್ಯಮ ಆದಾಯದ ದೇಶಗಳಿಗೆ ನೀಡಲಾಗುವುದು ಎಂದು ಬ್ಯಾಂಕ್‌ನ ವಕ್ತಾರರೊಬ್ಬರು ತಿಳಿಸಿದರು.

‘‘ಪರಿಣಾಮಕಾರಿ ಮತ್ತು ಸುರಕ್ಷಿತ ಕೋವಿಡ್-19 ಲಸಿಕೆಯು ಜಗತ್ತು ಸುರಕ್ಷಿತವಾಗಿ ಸಾಮಾನ್ಯ ಸ್ಥಿತಿಗೆ ಮರಳುವ ಅತ್ಯಂತ ಭರವಸೆಯ ದಾರಿಯಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News