ಇಂಧನ ವಿಮಾನಕ್ಕೆ ಢಿಕ್ಕಿ ಹೊಡೆದು ಯುದ್ಧವಿಮಾನ ಪತನ

Update: 2020-09-30 17:17 GMT

ವಾಶಿಂಗ್ಟನ್, ಸೆ. 30: ಅಮೆರಿಕ ವಾಯುಪಡೆಯ ಎಫ್-35ಬಿ ಯುದ್ಧ ವಿಮಾನವೊಂದು ಇಂಧನ ಪೂರೈಕೆ ವಿಮಾನಕ್ಕೆ ಆಕಾಶದಲ್ಲಿ ಢಿಕ್ಕಿ ಹೊಡೆದು ಪತನಗೊಂಡಿದೆ ಎಂದು ಅವೆುರಿಕದ ಮರೀನ್ ಸೇನಾ ಘಟಕ ತಿಳಿಸಿದೆ.

 ಎಫ್-35ಬಿ ವಿಮಾನದ ಪೈಲಟ್ ಕೆಳಗೆ ಹಾರಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂಧನ ಪೂರೈಕ ವಿಮಾನದ ಸಿಬ್ಬಂದಿ ಸುರಕ್ಷಿತವಾಗಿ ಭೂಸ್ಪರ್ಷ ಮಾಡಿದ್ದಾರೆ.

ಕ್ಯಾಲಿಫೋರ್ನಿಯದ ಇಂಪೀರಿಯಲ್ ಕೌಂಟಿಯಲ್ಲಿ ಅಪಘಾತ ಸಂಭವಿಸಿದೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News