‘ಆರೋಗ್ಯಕರ ವೃದ್ಧಾಪ್ಯದ ದಶಕ’ ಅಭಿಯಾನ ಉದ್ಘಾಟಿಸಿದ ಸಚಿವ ಹರ್ಷ ವರ್ಧನ್

Update: 2020-10-01 17:36 GMT

ಹೊಸದಿಲ್ಲಿ, ಅ. 1: ವೃದ್ಧರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಮುಖ್ಯವಾಹಿನಿಗೆ ತರುವ ಹಾಗೂ ಅವರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆಗಳನ್ನು ತಲುಪಿಸುವ ಬಗ್ಗೆ ಚರ್ಚಿಸುವ ಉದ್ದೇಶ ಹೊಂದಿದ ಅಭಿಯಾನ ‘ಡಿಕೇಡ್ಸ್ ಆಫ್ ಹೆಲ್ತಿ ಏಜನಿಂಗ್ (2020-2030)’ (ಆರೋಗ್ಯಕರ ವೃದ್ಧಾಪ್ಯದ ದಶಕ)ಅನ್ನು ಕೇಂದ್ರ ಆರೋಗ್ಯ ಸಚಿವ ಹರ್ಷ ವರ್ಧನ್ ಗುರುವಾರ ಉದ್ಘಾಟಿಸಿದರು.

ವೃದ್ಧರ ಅಂತಾರಾಷ್ಟ್ರೀಯ ದಿನವಾದ ಗುರುವಾರ ಹರ್ಷವರ್ಧನ್ ವೃದ್ಧಾಪ್ಯದಲ್ಲಿ ಆರೋಗ್ಯಕರ ಬದುಕನ್ನು ಉತ್ತೇಜಿಸುವಲ್ಲಿ ಸರಕಾರದ ಬದ್ಧತೆಯನ್ನು ಮರು ನೆನಪಿಸಿದರು.

 ಅಕ್ಟೋಬರ್ 1ನ್ನು ಅಂತಾರಾಷ್ಟ್ರೀಯ ವೃದ್ಧರ ದಿನವೆಂದು ವಿಶ್ವಸಂಸ್ಥೆ ಘೋಷಿಸಿದೆ. ತಮ್ಮ ಕುಟುಂಬ, ಸಮುದಾಯ ಹಾಗೂ ಸಮಾಜಗಳಲ್ಲಿ ವೃದ್ಧರ ಕೊಡುಗೆಗಳನ್ನು ಗುರುತಿಸುವ ಹಾಗೂ ವೃದ್ಧಾಪ್ಯದ ವಿಷಯಗಳ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶವನ್ನು ಈ ದಿನಾಚರಣೆ ಹೊಂದಿದೆ ಎಂದು ಅವರು ಹೇಳಿದ್ದಾರೆ.

ಪ್ರಾಥಮಿಕ ಹಾಗೂ ಎರಡನೆಯ ಹಂತದಲ್ಲಿ ವೃದ್ಧರಿಗೆ ಸಮಗ್ರ, ಕೈಗೆಟಕುವ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶ ಹೊಂದಿದ ‘ಹೆಲ್ತ್ ಕೇರ್ ಫಾರ್ ದಿ ಎಲ್ಡರ್ಲಿ’ (ಎನ್‌ಪಿಎಚ್‌ಸಿಇ) ನ ರಾಷ್ಟ್ರೀಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News