ಹತ್ರಸ್ ಅತ್ಯಾಚಾರ, ಸಾವು ಪ್ರಕರಣ: ಉ.ಪ್ರ. ಉನ್ನತಾಧಿಕಾರಿಗಳಿಗೆ ಹೈಕೋರ್ಟ್ ಸಮನ್ಸ್

Update: 2020-10-01 17:40 GMT

 ಲಕ್ನೊ, ಅ.1: ವ್ಯಾಪಕ ಆಕ್ರೋಶವನ್ನು ಹುಟ್ಟುಹಾಕಿರುವ ಹತ್ರಸ್ ಸಾಮೂಹಿಕ ಅತ್ಯಾಚಾರ ಪ್ರಕರಣದತ್ತ ಗುರುವಾರ ಗಮನಹರಿಸಿರುವ ಅಲಹಾಬಾದ್ ಹೈಕೋರ್ಟ್‌ನ ಲಕ್ನೊ ಪೀಠವು ಉತ್ತರಪ್ರದೇಶ ಸರಕಾರ ಹಾಗೂ ರಾಜ್ಯ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದು, ಅಕ್ಟೋಬರ್ 12ರಂದು ಹಾಜರಾಗುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಮಂಗಳವಾರ ನಿಧನರಾಗಿರುವ 20ರ ಹರೆಯದ ಯುವತಿಯ ಕುಟುಂಬದ ಸದಸ್ಯರಿಗೂ ನ್ಯಾಯಾಲಯದಲ್ಲಿ ಹಾಜರಿರುವಂತೆ ತಿಳಿಸಲಾಗಿದೆ. ಇಡೀ ದೇಶವನ್ನು ಬೆಚ್ಚಿಬೀಳಿಸಿರುವ 2 ಗಂಟೆ ರಾತ್ರಿಯಲ್ಲಿ ನಡೆದಿರುವ ಅಂತ್ಯಕ್ರಿಯೆ ಕುರಿತು ನ್ಯಾಯಾಲಯ ಸತ್ಯಾಂಶ ಪತ್ತೆ ಹಚ್ಚಬಹುದು.

ಈ ವಿಷಯವು ಅಪಾರ ಸಾರ್ವಜನಿಕ ಪ್ರಾಮುಖ್ಯತೆ ಹಾಗೂ ಸಾರ್ವಜನಿಕ ಹಿತಾಸಕ್ತಿಯನ್ನು ಹೊಂದಿದೆ. ಏಕೆಂದರೆ ಇದು ರಾಜ್ಯ ಅಧಿಕಾರಿಗಳಿಂದ ಉನ್ನತ ಮಟ್ಟದ ಆರೋಪವನ್ನು ಒಳಗೊಂಡಿರುತ್ತದೆ. ಇದರ ಪರಿಣಾಮವಾಗಿ ಮೃತಪಟ್ಟವರು ಮಾತ್ರವಲ್ಲ ಅವರ ಕುಟುಂಬ ಸದಸ್ಯರ ಮೂಲ ಮಾನವ ಹಾಗೂ ಮೂಲಭೂತ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯವು ತನ್ನ ನೋಟಿಸ್‌ನಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News