ಸುರಕ್ಷಿತ ಅಂತರ ನಿಯಮಗಳ ಉಲ್ಲಂಘನೆ: ಕರಾಚಿಯಲ್ಲಿ 100ಕ್ಕೂ ಅಧಿಕ ರೆಸ್ಟಾರೆಂಟ್, ಮದುವೆ ಹಾಲ್‌ಗಳ ಮುಚ್ಚುಗಡೆ

Update: 2020-10-02 17:59 GMT

ಕರಾಚಿ,ಅ.2: ಕೋವಿಡ್-19 ಸಾವಿನ ಪ್ರಕರಣಗಳ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಕರಾಚಿಯಲ್ಲಿ ಸುರಕ್ಷಿತ ಅಂತರದ ನಿಯಮಗಳನ್ನು ಉಲ್ಲಂಘಿಸಿರುವ 100ಕ್ಕೂ ಅಧಿಕ ರೆಸ್ಟಾರೆಂಟ್‌ಗಳನ್ನು ಹಾಗೂ 6 ಮದುವೆಹಾಲ್‌ಗಳನ್ನು ಅಧಿಕಾರಿಗಳು ಮುಚ್ಚುಗಡೆಗೊಳಿಸಿದ್ದಾರೆ.

 ಕೊರೋನಾ ವೈರಸ್ ಹರಡುವುದನ್ನು ತಡೆಯುವ ಪ್ರಯತ್ನವಾಗಿ ನಗರದಲ್ಲಿ ಸೋಂಕು ಹರಡುವ ಅತ್ಯಧಿಕ ಅಪಾಯವಿರುವಂತಹ ಪ್ರದೇಶಗಳಲ್ಲಿ ಮತ್ತೆ ಲಾಕ್‌ಡೌನ್ ವಿಧಿಸಲಾಗಿದೆ. ದೇಶದ ಇತರ ಭಾಗಗಳಲ್ಲಿಯೂ ಸುರಕ್ಷಿತ ಅಂತರದ ಕಾನೂನುಗಳ ಉಲ್ಲಂಘನೆಗಳ ವಿರುದ್ಧವೂ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆಯೆಂದು ಪಾಕ್ ಅಧಿಕಾರಿಗಳು ತಿಳಿಸಿದ್ದಾರೆ.

   ಕಳೆದ ತಿಂಗಳುಗಳಿಂದ ಪಾಕಿಸ್ತಾನದಲ್ಲಿ ಕೋವಿಡ್-19 ನಿಯಂತ್ರಣ ಕುರಿತ ನಿಯಮಗಳನ್ನು ಪಾಲಿಸುವ ಶರತ್ತಿನಲ್ಲಿ ಮದುವೆ ಹಾಲ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಆನಂತರ ವಿವಾಹ ಮತ್ತಿತರ ಸಮಾರಂಭಗಳಲ್ಲಿ ಸುರಕ್ಷಿತ ಅಂತರವನ್ನು ಉಲ್ಲಂಘಿಸುವ ಹಲವಾರು ಪ್ರಕರಣಗಳು ವರದಿಯಾಗಿವೆ.

ಪಾಕಿಸ್ತಾನದಲ್ಲಿ ಈವರೆಗೆ 3,13,431 ಕೊರೋನ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, 6449 ಮಂದಿ ಸಾವನ್ನಪ್ಪಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News