×
Ad

ಟ್ರಂಪ್ ದಂಪತಿಯ ಚೇತರಿಕೆಗೆ ವಿಶ್ವ ನಾಯಕರ ಹಾರೈಕೆ

Update: 2020-10-02 23:39 IST

ವಾಶಿಂಗ್ಟನ್,ಅ.3: ಕೊರೋನ ವೈರಸ್ ಸೋಂಕಿಗೊಳಗಾದ ಡೊನಾಲ್ಡ್ ಟ್ರಂಪ್ ಹಾಗೂ ಅವರ ಪತ್ನಿ, ಅಮೆರಿಕದ ಪ್ರಥಮ ಮಹಿಳೆ ಮೆಲನಿಯಾ ಟ್ರಂಪ್ ಶೀಘ್ರವೇ ಗುಣಮುಖರಾಗಲೆಂದು ಹಾರೈಸಿ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಟ್ವೀಟ್ ಮಾಡಿದ್ದಾರೆ.

ಬೋರಿಸ್ ಜಾನ್ಸನ್ ಅವರಿಗೂ ಎರಡು ತಿಂಗಳ ಹಿಂದೆ ಕೊರೋನ ಸೋಂಕು ತಗಲಿದ್ದು, ಆನಂತರ ಗುಣಮುಖಗೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್‌ನಲ್ಲಿ ಅಮೆರಿಕದ ಅಧ್ಯಕ್ಷ ಹಾಗೂ ತನ್ನ ಸ್ನೇಹಿತ ಡೊನಾಲ್ಡ್ ಟ್ರಂಪ್ ಹಾಗೂ ಅಮೆರಿಕದ ಪ್ರಥಮ ಮಹಿಳೆ ಶೀಘ್ರವೇ ಗುಣಮುಖರಾಗಲಿ ಹಾಗೂ ಉತ್ತಮ ಆರೋಗ್ಯವನ್ನು ಹೊಂದಲಿ ಎಂದು ಹಾರೈಸಿದ್ದಾರೆ. ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಹಾಗೂ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ಅವರೂ ಕೂಡಾ ಅಮೆರಿಕ ಅಧ್ಯಕ್ಷ ಚೇತರಿಸಿಕೊಳ್ಳಲೆಂದು ಕೋರಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News