ವಿಶ್ವಾಸ ಕೊರತೆಯಿಂದಾಗಿ ಅಮೆರಿಕ ಲಾದೆನ್ ಅಡಗುದಾಣದ ಮಾಹಿತಿ ಪಾಕ್‌ಗೆ ನೀಡಿರಲಿಲ್ಲ

Update: 2020-10-02 18:11 GMT

ವಾಶಿಂಗ್ಟನ್,ಅ.2: ಅಲ್‌ಖಾಯ್ದ ನಾಯಕ ಉಸಾಮಾ ಬಿನ್ ಲಾದೆನ್‌ನ ಅಡಗುದಾಣದ ಕುರಿತ ರಹಸ್ಯ ಮಾಹಿತಿಗಳನ್ನು ಅಮೆರಿಕವು ಪಾಕಿಸ್ತಾನಕ್ಕೆ ನೀಡಿರಲಿಲ್ಲವೆಂದು ಅಮೆರಿಕದ ಮಾಜಿ ರಕ್ಷಣಾ ಕಾರ್ಯದರ್ಶಿ ಹಾಗೂ ಮಾಜಿ ಸಿಐಎ ವರಿಷ್ಠ ಲಿಯೋನ್ ಪೆನೆಟ್ಟಾ ಶುಕ್ರವಾರ ಬಹಿರಂಗಪಡಿಸಿದ್ದಾರೆ.

   ವಿಶ್ವಾಸದ ಕೊರತೆ ಹಾಗೂ ಪಾಕ್ ಆಡಳಿತದ ಜೊತೆ ಹಂಚಿಕೊಂಡ ಬೇಹುಗಾರಿಕಾ ಮಾಹಿತಿಗಳು ಭಯೋತ್ಪಾದಕರಿಗೆ ಸೋರಿಕೆಯಾಗಿರುವುದರ ತನ್ನ ಹಿಂದಿನ ಅನುಭವಗಳು ಆಧಾರದಲ್ಲಿ ಅಮೆರಿಕವು ಲಾದೆನ್‌ನ ಅಡಗುದಾಣದ ಕುರಿತ ಮಾಹಿತಿಯನ್ನು ಪಾಕಿಸ್ತಾನಕ್ಕೆ ನೀಡಲಿಲ್ಲವೆಂದು ಅವರು ಹೇಳಿದ್ದಾರೆ.

ವಿಯೋನ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಿದ್ದ ಅವರು ಒಸಾಮಾ ಬಿನ್ ಲಾದೆನ್ ಅವಿತುಕೊಂಡಿದ್ದ ಅಬೊಟ್ಟಾಬಾದ್ ನಿವಾಸದ ಬಗ್ಗೆ ಪಾಕಿಸ್ತಾನದಲ್ಲಿ ಯಾರಿಗೂ ತಿಳಿದೇ ಇರಲಿಲ್ಲವೆಂಬುದು ನಂಬುದು ತೀರಾ ಕಷ್ಟವೆಂದು ಅವರು ಅಭಿಪ್ರಾಯಿಸಿದ್ದಾರೆ.ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯ ಕಾರ್ಯಾಲಯಗಳು ಲಾದೆನ್ ಅವಿತಿದ್ದ ನಿವಾಸದಿಂದ ಸ್ವಲ್ಪವೇ ದೂರದಲ್ಲಿದ್ದವು ಎಂದವರು ಹೇಳಿದ್ದರು.

  ಜಗತ್ತಿನ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಹಾಗೂ ಅಲ್‌ಖಾಯ್ದಾ ನಾಯಕ ಉಸಾಮಾ ಬಿನ್ ಲಾದೆನ್‌ನನ್ನು ಪಾಕಿಸ್ತಾನದ ಅಬೊಟ್ಟಾಬಾದ್‌ನಲ್ಲಿರುವ ಆತನ ನಿವಾಸದ ಮೇಲೆ ಅಮೆರಿಕದ ನೌಕಾಪಡೆಯ ಸೀಲ್ ತಂಡವು 2011ರ ಮೇ 2ರಂದು ಮಿಂಚಿನ ಕಾರ್ಯಾಚರಣೆ ನಡೆಸಿ ಹತ್ಯೆಗೈದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News