ಹತ್ರಸ್ ಪ್ರಕರಣ: ಪ್ರತಿಭಟನಕಾರರು-ಪೊಲೀಸರ ನಡುವೆ ಘರ್ಷಣೆ

Update: 2020-10-03 17:09 GMT

ಆಗ್ರಾ, ಅ. 3: ಹತ್ರಸ್ ನ ದಲಿತ ಯುವತಿಯ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ಉತ್ತರಪ್ರದೇಶದ ಆಗ್ರಾದಲ್ಲಿ ಶನಿವಾರ ನಡೆದ ಪ್ರತಿಭಟನೆ ಸಂದರ್ಭ ವಾಲ್ಮೀಕಿ ಸಮುದಾಯದ ಸದಸ್ಯರು ಸೇರಿದಂತೆ ಪ್ರತಿಭಟನಕಾರರು ಹಾಗೂ ಪೊಲೀಸರ ನಡುವೆ ಘರ್ಷಣೆ ನಡೆದಿದೆ.

ಆಕ್ರೋಶಿತ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸುವುದು, ಘೋಷಣೆಗಳನ್ನು ಕೂಗುವುದು ವೀಡಿಯೊದಲ್ಲಿ ದಾಖಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸರು ಅಶ್ರುವಾಯು ಸೆಲ್‌ಗಳನ್ನು ಸಿಡಿಸುವುದು ಹಾಗೂ ಲಾಠಿ ಪ್ರಹಾರ ನಡೆಸಿರುವುದು ಕೂಡ ವೀಡಿಯೊದಲ್ಲಿ ದಾಖಲಾಗಿದೆ.

‘‘ಪೊಲೀಸರು ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಆಕ್ಷೇಪಾರ್ಹ ಪೋಸ್ಟ್‌ಗಳ ಬಗ್ಗೆ ನಮ್ಮ ಸೈಬರ್ ಕ್ರೈಮ್ ತಂಡ ಸಾಮಾಜಿಕ ಜಾಲ ತಾಣವನ್ನು ಪರಿಶೀಲಿಸುತ್ತಿದೆ. ಎಲ್ಲರೂ ಶಾಂತಿ ಕಾಪಾಡುವಂತೆ ಮನವಿ ಮಾಡುತ್ತಿದ್ದೇನೆ’’ ಎಂದು ಆಗ್ರಾ(ನಗರ) ದ ಪೊಲೀಸ್ ಅಧೀಕ್ಷಕ ಬಿ.ಆರ್. ಪ್ರಮೋದ್ ಹೇಳಿದ್ದಾರೆ. ಈ ನಡುವೆ ನಗರದಾದ್ಯಂತ ಸ್ವಚ್ಛತಾ ಕೆಲಸವನ್ನು ಬಹಿಷ್ಕರಿಸುವುದಾಗಿ ವಾಲ್ಮೀಕಿ ಸಮುದಾಯದ ಸದಸ್ಯರು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News