×
Ad

ಸ್ಪೇನ್‌: ಕೋವಿಡ್-19 ಎರಡನೇ ಅಲೆ ಆರಂಭ ಮ್ಯಾಡ್ರಿಡ್‌ನಲ್ಲಿ ಮತ್ತೆ ಲಾಕ್‌ಡೌನ್

Update: 2020-10-03 23:41 IST

 ಮ್ಯಾಡ್ರಿಡ್,ಆ.3: ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಕೊರೋನ ವೈರಸ್ ಸೋಂಕಿನ ಎರಡನೇ ಆಲೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಶನಿವಾರದಿಂದ ನಗರದಲ್ಲಿ ಎರಡು ವಾರಗಳ ಕಾಲ ಭಾಗಶಃ ಲಾಕ್‌ಡೌನ್ ಹೇರಲಾಗಿದೆ. ಯುರೋಪ್ ಖಂಡದ ರಾಷ್ಟ್ರಗಳಲ್ಲೇ ಸ್ಪೇನ್ ಕೊರೋನ ಸೋಂಕಿನ ಎರಡನೇ ಅಲೆಯಿಂದ ಹೆಚ್ಚು ಬಾಧಿತವಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

  ಭಾಗಶಃ ಲಾಕ್‌ಡೌನ್‌ನಿಂದಾಗಿ ಮ್ಯಾಡ್ರಿಡ್ ನಗರಕ್ಕೆ ಜನರ ಅನಗತ್ಯ ಆಗಮನ ಹಾಗೂ ನಿರ್ಗಮನಗಳನ್ನು ನಿಷೇಧಿಸಲಾಗಿದೆ. ಲಾಕ್‌ಡೌನ್‌ನಿಂದಾಗಿ ನಗರದ ಸುಮಾರು 40.80 ಲಕ್ಷ ಜನರು ಬಾಧಿತರಾಗಲಿದ್ದಾರೆ. ರೆಸ್ಟಾರೆಂಟ್‌ಗಳು ಬೆಳಗ್ಗೆ 11:00 ಗಂಟೆಗೆ ತೆರೆದು, ರಾತ್ರಿ 10:00 ಗಂಟೆಯೊಳಗೆ ಮುಚ್ಚುಗಡೆಗೊಳಿಸಲು ಸೂಚಿಸಲಾಗಿದೆ. ಅಲ್ಲದೆ ಹೊಟೇಲ್‌ಗಳಲ್ಲಿ ಗ್ರಾಹಕರ ಆಸನ ಸಾಮರ್ಥ್ಯದಲ್ಲಿ ಶೇ.50ರಷ್ಟು ಇಳಿಕೆಯನ್ನು ಮಾಡಲಾಗಿದೆ.

 ಹೆಚ್ಚುತ್ತಿರುವ ಕೊರೋನ ವೈರಸ್ ಸೋಂಕಿನ ಹಾವಳಿಗೆ ಕಡಿವಾಣ ಹಾಕಲು ನಗರದಲ್ಲಿ ಭಾಗಶಃ ಲಾಕ್‌ಡೌನ್ ಹೇರುವುದು ಅನಿವಾರ್ಯವೆಂದು ಸ್ಪೇನ್‌ನ ಪ್ರಧಾನಿ ಪೆಡ್ರೊ ಸ್ಯಾಂಚೆಝ್ ತಿಳಿಸಿದ್ದಾರೆ. ಕಳೆದ ಮಾರ್ಚ್ ಹಾಗೂ ಎಪ್ರಿಲ್‌ನಲ್ಲಿ ಸ್ಪೇನ್‌ನಲ್ಲಿ ಕೊರೋನ ಸೋಂಕಿನ ಹಾವಳಿ ವ್ಯಾಪಕವಾಗಿದ್ದು, ನೂರಾರು ಸಾವುಗಳು ಸಂಭವಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News