×
Ad

ಟ್ರಂಪ್ ಬೆಂಬಲಿಗರಿಂದ ‘ಆಪರೇಶನ್ ಎಂಎಜಿಎ’ ಅಭಿಯಾನ

Update: 2020-10-04 22:55 IST

ವಾಶಿಂಗ್ಟನ್,ಅ.4: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನ ಸೋಂಕಿಗೊಳಗಾಗಿ ಆಸ್ಪತ್ರೆ ಸೇರಿರುವುದರಿಂದ, ಅಧ್ಯಕ್ಷೀಯ ಚುನಾವಣೆಗೆ ಅವರ ಅನುಪಸ್ಥಿತಿಯಲ್ಲಿ ಬಿರುಸಿನ ಪ್ರಚಾರವನ್ನು ನಡೆಸಲು ಅವರ ಬೆಂಬಲಿಗರು ‘ ಅಪರೇಶನ್ ಎಂಎಜಿಎ’ ಎಂಬ ಬೃಹತ್ ಅಭಿಯಾನವನ್ನು ಆರಂಭಿಸಿದ್ದಾರೆ.

  ಟ್ರಂಪ್ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವವರೆಗೂ, ಈ ಅಭಿಯಾನ ನಡೆಯಲಿದೆಯೆಂದು ಅವರ ಬೆಂಬಲಿಗರು ಹೇಳಿದ್ದಾರೆ.

ಮೇಕ್ ಆಮೆರಿಕಾ ಗ್ರೇಟ್ ಎಗೇನ್ (ಎಂಎಜಿಎ) ಎಂಬ ಘೋಷವಾಕ್ಯದ ಈ ಅಭಿಯಾನದಲ್ಲಿ ಉಪಾಧ್ಯಕ್ಷ ಮೈಕ್ ಪೆನ್ಸ್ ಹಾಗೂ ಟ್ರಂಪ್ ಕುಟುಂಬದ ಸದಸ್ಯರು ಪಾಲ್ಗೊಳ್ಳಲಿದ್ದು, ಚುನಾವಣಾ ದೃಷ್ಟಿಯಿಂದ ವ್ಯೂಹಾತ್ಮಕವಾದ ರಾಜ್ಯಗಳಲ್ಲಿ ಬಿರುಸಿನ ಪ್ರಚಾರ ನಡೆಸಲಿದ್ದಾರೆ.

‘‘ ಆಪರೇಶನ್ ಎಂಎಜಿಎ ಆಂದೋಲನವು ಅಧ್ಯಕ್ಷ ಟ್ರಂಪ್ ಅವರ ಚುನಾವಣಾ ಪ್ರಚಾರಕ್ಕೆ ಸಂಪೂರ್ಣ ವೇಗವನ್ನು ನೀಡಲಿದೆ.ನಮ್ಮ ‘ದಂಡನಾಯಕ’ ಆಸ್ಪತ್ರೆಯಿಂದ ಮರಳುವವರೆಗೂ ಈ ಅಭಿಯಾನವು ಚುರುಕಿನಿಂದ ಸಾಗಲಿದೆ’’ ಎಂದು ಟ್ರಂಪ್ ಅವರ ಚುನಾವಣಾ ಪ್ರಚಾರದ ಮ್ಯಾನೇಜರ್ ಬಿಲ್‌ಸ್ಟೀಫನ್ ತಿಳಿಸಿದ್ದಾರೆ. ಕೋವಿಡ್-19 ಸೋಂಕಿಗೊಳಗಾಗಿರುವ ಹಿನ್ನೆಲೆಯಲ್ಲಿ ಬಿಲ್‌ಸ್ಟೀಫ್ ಅವರು ಕ್ವಾರಂಟೈನ್‌ನಲ್ತ್‌ದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News