×
Ad

ಆನ್‌ಲೈನ್ ವಂಚನೆ ಹಗರಣಗಳ ವಿರುದ್ಧ ಭಾರತ-ಬ್ರಿಟನ್ ಜಂಟಿ ಕಾರ್ಯಾಚರಣೆ

Update: 2020-10-04 23:38 IST

ಲಂಡನ್. 4:ಕಂಪ್ಯೂಟರ್ ಸಾಫ್ಟ್‌ವೇರ್ ಸೇವೆಯಲ್ಲಿ ನಡೆದಿರುವ ವಂಚನೆ ಪ್ರಕರಣಗಳಿಗೆ ಸಂಬಂಧಿಸಿ ಬ್ರಿಟಿಶ್ ಹಾಗೂ ಭಾರತೀಯ ಭದ್ರತಾಸಂಸ್ಥೆಗಳು  ಜಂಟಿ ಕಾರ್ಯಾಚರಣೆ ನಡೆಸಿ ಭಾರತದ ಆರು ನಗರಗಳಲ್ಲಿ 10ಕ್ಕೂ ಅಧಿಕ ಆರೋಪಿ ಕಂಪೆನಿಗಳ ಮೇಲೆ ದಾಳಿ ನಡೆಸಿವೆ ಎಂದು ಬ್ರಿಟನ್‌ನ ಅಧಿಕಾರಿಗಳು ತಿಳಿಸಿದ್ದಾರೆ.

   ತಮ್ಮ ಕಂಪ್ಯೂಟರ್‌ಗಳಲ್ಲಿ ಮಾಲ್‌ವೇರ್ ಸೇರಿದಂತೆ ಗಂಭೀರವಾದ ತಾಂತ್ರಿಕ ಸಮಸ್ಯೆಗಳಿರುವುದಾಗಿಯೂ ಅದನ್ನು ಸರಿಪಡಿಸಿಕೊಡಲಾಗುವುದೆಂಬ ಸಂದೇಶಗಳನ್ನು ಈ ಕಂಪೆನಿಗಳು ವಂಚನೆಗೊಳಗಾದವರ ಕಂಪ್ಯೂಟರ್‌ಗಳಿಗೆ ಕಳುಹಿಸುತ್ತಿದ್ದವು. ಇದನ್ನು ಸರಿಪಡಿಸಲು ಹೆಲ್ಪ್‌ಲೈನ್ ಮೂಲಕ ತಮ್ಮನ್ನು ಸಂಪರ್ಕಿಸುವಂತೆ ಅವರು ಮಾಹಿತಿ ನೀಡುತ್ತಿದ್ದವು ಹಾಗೂ ಅದನ್ನು ಸರಿಪಡಿಸಲು ಶುಲ್ಕವನ್ನು ವಸೂಲು ಮಾಡುತ್ತಿದ್ದವು ಎಂದು ಬ್ರಿಟನ್‌ನ ತನಿಖಾಧಿಕಾರಿಗಳು ಆರೋಪಿಸಿದ್ದಾರೆ.

     ಈ ಕಂಪೆನಿಗಳಿಗೆ ಗ್ರಾಹಕರು ಆನ್‌ಲೈನ್ ಮೂಲಕ ಶುಲ್ಕವನ್ನು ಪಾವತಿಸಬೇಕಾಗಿತ್ತು. ಸೆಪ್ಟೆಂಬರ್ 17ರಂದು ಸಿಬಿಐ ಭಾರತದ 6ನಗರಗಳಲ್ಲಿ ಸುಮಾರು 10 ವಂಚಕ ಕಂಪೆನಿಳ ಮೇಲೆ ದಾಳಿ ನಡೆಸಿರುವುದಾಗಿ ಬ್ರಿಟನ್ ಅಧಿಕಾರಿಗಳು ತಿಳಿಸಿದಾರೆ.

ಈ ಕಂಪೆನಿಗಳ ಜೊತೆ ನಂಟು ಹೊಂದಿದ್ದ ಕೆಲವು ವ್ಯಕ್ತಿಗಳ ಮನೆಗಳಇಗೂ ತನಿಖಾಧಿಕಾರಿಗಳು ಭೇಟಿ ನೀಡಿರುವುದಾಗಿ ಲಂಡನ್ ನಗರದ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News