ಶ್ರೀಕಾಂತ್, ಸೈನಾಗೆ ಮೊದಲ ಸುತ್ತಿನಲ್ಲಿ ಸುಲಭದ ಸವಾಲು

Update: 2020-10-04 18:49 GMT

ಒಡೆನ್ಸ್: ಡೆನ್ಮಾರ್ಕ್ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಪಂದ್ಯಾವಳಿಯ ಮೊದಲ ಸುತ್ತಿನಲ್ಲಿ ಭಾರತದ ಶ್ರೀಕಾಂತ್ ಮತ್ತು ಸೈನಾ ನೆಹ್ವಾಲ್ ಸುಲಭದ ಸವಾಲು ಪಡೆದಿದ್ದಾರೆ.

ಡೆನ್ಮಾರ್ಕ್ ಓಪನ್ ಪಂದ್ಯಾವಳಿ ಅಕ್ಟೋಬರ್ 13 ರಿಂದ ಪ್ರಾರಂಭವಾಗಲಿದೆ. ಟೋಕಿಯೊ ಒಲಿಂಪಿಕ್ ಮೇಲೆ ಕಣ್ಣಿಟ್ಟಿರುವ ಮಾಜಿ ವಿಶ್ವ ನಂಬರ್ ಒನ್ ಸೈನಾ ಮತ್ತು ಶ್ರೀಕಾಂತ್ ಟೂರ್ನಿಯಲ್ಲಿ ಅಮೂಲ್ಯವಾದ ಶ್ರೇಯಾಂಕದ ಅಂಕಗಳನ್ನು ಕಲೆ ಹಾಕಲು ಪ್ರಯತ್ನಿಸಲಿದ್ದಾರೆ.

   ರಿಯೊ ಒಲಿಂಪಿಕ್ಸ್ ಕ್ವಾರ್ಟರ್ ಫೈನಲ್ ತಲುಪಿದ್ದ ಕಿದಂಬಿ ಶ್ರೀಕಾಂತ್ ಬುಧವಾರ ಪ್ರಕಟಗೊಂಡ ಡೆನ್ಮಾರ್ಕ್ ಪಂದ್ಯಾವಳಿಗೆ ಡ್ರಾದಲ್ಲಿ ಮೊದಲ ಸುತ್ತಿನಲ್ಲಿ ಇಂಗ್ಲೆಂಡ್‌ನ ಟೋಬಿ ಪೆಂಟಿರನ್ನು ಎದುರಿಸುವರು. ಎರಡನೇ ಸುತ್ತಿನಲ್ಲಿ ಭಾರತದ ಸಹ ಆಟಗಾರ ಸುಭಂಕರ್ ಡೇ ಸವಾಲು ಎದುರಾಗುವ ಸಾಧ್ಯತೆ ಇದೆ.

ಸುಭಂಕರ್ ಮೊದಲ ಸುತ್ತಿನಲ್ಲಿ ಕೆನಡಾದ ಜೇಸನ್ ಆಂಥೋನಿ ಹೋ-ಶುರನ್ನು ಎದುರಿಸಲಿದ್ದಾರೆ.

 ಮಹಿಳಾ ಸಿಂಗಲ್ಸ್ ಓಪನ್‌ನಲ್ಲಿ ವಿಶ್ವದ 20ನೇ ಕ್ರಮಾಂಕದ ಸೈನಾ ಅವರಿಗೆ ಫ್ರಾನ್ಸ್‌ನ ಯೆಲ್ಲೆ ಹೊಯಾಕ್ಸ್ ಸವಾಲು ಎದುರಾಗಲಿದೆ.

ಸೈನಾರ ಪತಿ ಪಿ. ಕಶ್ಯಪ್ ಅವರು ಜಪಾನ್‌ನ ಕೋಕಿ ವಟನಾಬೆರನ್ನು ಎದುರಿಸುವರು.

  ಯುವ ಆಟಗಾರ ಲಕ್ಷ ಸೇನ್‌ಗೆ ಇದು ಒಂದು ದೊಡ್ಡ ಅವಕಾಶವಾಗಿದೆ. ಕಳೆದ ವರ್ಷ ನಡೆದ ವಿಶ್ವ ಜೂನಿಯರ್ ಚಾಂಪಿಯನ್‌ಶಿಪ್‌ನಲ್ಲಿ ಫ್ರಾನ್ಸ್ ಪರ ಮೊದಲ ಪದಕ ಗೆದ್ದ ಕ್ರಿಸ್ಟೋ ಪೊಪೊವ್ ಸವಾಲು ಎದುರಾಗಲಿದೆ.

ಅಜಯ್ ಜಯರಾಮ್ ಮೂರನೇ ಶ್ರೇಯಾಂಕಿತ ಸ್ಥಳೀಯ ಹೀರೋ ಆ್ಯಡರ್ಸ್ ಆಂಟನ್ಸನ್ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News