×
Ad

ಅಫ್ಘಾನ್: ಗವರ್ನರ್ ಗುರಿಯಾಗಿಸಿ ದಾಳಿ; 8 ಸಾವು

Update: 2020-10-05 22:36 IST

ಕಾಬೂಲ್ (ಅಫ್ಘಾನಿಸ್ತಾನ), ಅ. 5: ಪೂರ್ವ ಅಫ್ಘಾನಿಸ್ತಾನದ ಲಗ್ಮನ್ ಪ್ರಾಂತದ ಗವರ್ನರ್‌ರ ವಾಹನಗಳ ಸಾಲನ್ನು ಗುರಿಯಾಗಿಸಿ ಸೋಮವಾರ ಆತ್ಮಹತ್ಯಾ ಬಾಂಬರ್ ಒಬ್ಬ ದಾಳಿ ನಡೆಸಿದ್ದು, ಕನಿಷ್ಠ 8 ಮಂದಿ ಮೃತಪಟ್ಟಿದ್ದಾರೆ ಎಂದು ಸರಕಾರಿ ಅಧಿಕಾರಿಗಳು ಹೇಳಿದ್ದಾರೆ.

ಕನಿಷ್ಠ 30 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಘಟನೆಯು ಲಗ್ಮನ್ ಪ್ರಾಂತದ ರಾಜಧಾನಿ ಮೆಹ್ತರ್ಲಮ್‌ನಲ್ಲಿ ನಡೆದಿದೆ.

ಗವರ್ನರ್ ರಹ್ಮತುಲ್ಲಾ ಯಾರ್ಮಲ್‌ರ ಪರಿಸ್ಥಿತಿಯ ಬಗ್ಗೆ ತಕ್ಷಣಕ್ಕೆ ಖಚಿತ ಮಾಹಿತಿ ಬಂದಿಲ್ಲ. ಆದರೆ, ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News